ಬ್ಯಾಂಕಾಕ್: ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನ (Bangkok) ಫುಡ್ ಮಾರ್ಕೆಟ್‌ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಬ್ಯಾಂಕಾಕ್‌ನ ಪ್ರಸಿದ್ಧ ಆರ್ ತೋರ್ ಕೋರ್ (Or To Ko market) ಫುಡ್ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ 5 ಜನರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಆಫ್ ಆಗಿದ್ದ ಸ್ಯಾಟಲೈಟ್ ಫೋನ್ ದಿಢಿರ್ ಆನ್ – ಇದೇ ಸುಳಿವಿಂದ ಉಗ್ರರ ಬೇಟೆ!
ಆರ್ ತೋರ್ ಕೋರ್ ಮಾರ್ಕೆಟ್‌ನ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಹಾಗೂ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇಬ್ಬರು ಮಾರಾಟಗಾರರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್ ಸಿಂಗ್ ಘರ್ಜನೆ
ಬಂದೂಕುಧಾರಿಗೂ ಮಾರ್ಕೆಟ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಗುಂಡಿನ ದಾಳಿಯ ನಿಖರ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಈ ರೀತಿಯ ಗುಂಡಿನ ದಾಳಿಗಳು ಸಾಮಾನ್ಯವಾಗಿವೆ. 2020ರಲ್ಲಿ ಕಿರಿಯ ಸೇನಾಧಿಕಾರಿ ಗುಂಡಿನ ದಾಳಿ ನಡೆಸಿ, 29 ಜನರ ಸಾವಿಗೆ ಕಾರಣನಾಗಿದ್ದ. ಈ ಘಟನೆಯಲ್ಲಿ 58 ಜನ ಗಾಯಗೊಂಡಿದ್ದರು.