– ಇಂದಿನಿಂದ 6 ದಿನ ಮುಳ್ಳಯ್ಯನಗಿರಿ ಬಂದ್
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಆರು ದಿನ ಟೂರಿಸ್ಟ್, ಮೂರು ದಿನ ಎಣ್ಣೆ ಬಂದ್ ಮಾಡಲಾಗುತ್ತಿದೆ. ಅಲ್ಲದೆ ಇಂದಿನಿಂದ 6 ದಿನಗಳ ಕಾಲ ಮುಳ್ಳಯ್ಯನಗಿರಿಗೆ (Mullayanagiri Peak) ಪ್ರವೇಶ ಕೂಡ ಬಂದ್ ಮಾಡಲಾಗುತ್ತಿದೆ.
ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಗೆ ನಿರ್ಬಂಧ ಹೇರಲಾಗಿದೆ. ದತ್ತಜಯಂತಿ (Dattajayanthi) ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುತ್ತಿದೆ.
ಇಂದಿನಿಂದ ಡಿಸೆಂಬರ್ 27ರ ಬುಧವಾರ ಸಂಜೆವರೆಗೆ ಎಲ್ಲಾ ಪ್ರವಾಸಿಗರಿಗೆ (Tourist) ಸಂಪೂರ್ಣ ನಿರ್ಬಂಧ ಹೇರಲಾಗುತ್ತಿದೆ. ಹೋಂಸ್ಟೇ, ರೆಸಾರ್ಟ್ ಗೆ ಬುಕ್ ಮಾಡಿದ್ದರೆ ಬರಬಹುದು, ತೊಂದರೆ ಇಲ್ಲ. ಆದರೆ ಪ್ರವಾಸಿ ತಾಣಗಳಿಗೆ ಹೋಗುವಂತಿಲ್ಲ, ಹೋಂ ಸ್ಟೇ, ರೆಸಾರ್ಟ್‍ನಲ್ಲೇ ಇರಬೇಕು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2ಗೆ ವಿಶ್ವದ ಸುಂದರ ವಿಮಾನ ನಿಲ್ದಾಣ ಗೌರವ
ಸದ್ಯ ಪ್ರವಾಸಿಗರ ನಿರ್ಬಂಧದಿಂದ ಸ್ಥಳೀಯರಿಗೆ ಕೊರೊನಾ ಆತಂಕ ದೂರವಾಗಿದೆ. ಮುಳ್ಳಯ್ಯನಗಿರಿ ಭಾಗಕ್ಕೆ ರಾಜ್ಯ-ಕೇರಳದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಇದೀಗ ಚಂದ್ರದ್ರೋಣ ಪರ್ವತಗಳ ಸಾಲು ಒಂದು ವಾರ ಸಂಪೂರ್ಣ ಬಂದ್ ಹಾಗೂ ದತ್ತಜಯಂತಿಯ ಕಡೇ ದಿನ 5 ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರಗಳಲ್ಲಿ ಎಣ್ಣೆ ಬಂದ್ ಮಾಡಲಾಗುತ್ತಿದೆ.