– ಕೆರೆಯಂಗಳದಲ್ಲಿ ಕಾಂಪೌಂಡ್‍ಗಾಗಿ ಸರಿಸುಮಾರು 3 ಕೋಟಿ ಖರ್ಚು
ಚಿಕ್ಕಬಳ್ಳಾಪುರ: ಅಮಾನಿ ಗೋಪಾಲಕೃಷ್ಣ ಕೆರೆಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು, ಜಿಲ್ಲಾಡಳಿತದಿಂದ ಸರಿಸುಮಾರು 6 ಕೋಟಿ ರೂಪಾಯಿ ಖರ್ಚು ಮಾಡಿ ಕೆರೆಯಂಗಳದಲ್ಲಿ ಕಟ್ಟಲಾಗಿದ್ದ ಗಾಜಿನ ಮನೆ ಈಗ ಕೆರೆಯಪಾಲಾಗಿದೆ.
Advertisement
ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಐದಾರು ವರ್ಷಗಳ ಹಿಂದೆ 3 ಕೋಟಿ ಖರ್ಚು ಮಾಡಿ ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿನ ಗಾಜಿನ ಮನೆ ಮಾದರಿಯಲ್ಲೇ ಇಲ್ಲೂ ಸಹ ಗಾಜಿನ ಮನೆ ನಿರ್ಮಾಣ ಮಾಡಲಾಗಿತ್ತು. ಗಾಜಿನ ಮನೆ ಸುತ್ತ ಕೆರೆಯಂಗಳದಲ್ಲಿ ಕಾಂಪೌಂಡ್ ಹಾಗೂ ಮುಖ್ಯ ಪ್ರವೇಶ ದ್ವಾರ, ಗಾಜಿನ ಮನೆ ಕಾವಲುಗಾರರಿಗೆ ಮನೆ ಸೇರಿದಂತೆ ಬೊಟಾನಿಕಲ್ ಗಾರ್ಡನ್ ಮಾಡುವ ಉದ್ದೇಶದಿಂದ ಕೊಳವೆಬಾವಿಗಳನ್ನ ಕೊರೆಸಲು ಸರಿಸುಮಾರು 3 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿತ್ತು. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್
Advertisement
Advertisement
ಆದರೆ ಈಗ ಭಾರೀ ಮಳೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಗೆ ಕಂದವಾರ ಕೆರೆಯಿಂದ ಭರಪೂರ ನೀರು ಹರಿದುಬರ್ತಿದ್ದು, ಗಾಜಿನ ಮನೆ ಕೆರೆಯಪಾಲಾಗಿದೆ. ಈ ಹಿಂದೆಯೇ ಕೆರೆಯಂಗಳದಲ್ಲಿ ಗಾಜಿನ ಮನೆ ನಿರ್ಮಾಣ ವಿರೋಧಿಸಿ, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದು, ಗಾಜಿನ ಮನೆ ತೆರವು ಮಾಡಲು ಲೋಕಾಯುಕ್ತ ಸಂಸ್ಥೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿದೆ ಎನ್ನಲಾಗಿದ್ದು, ಗಾಜಿನ ಮನೆ ಮಾತ್ರ ತೆರವಾಗಿಲ್ಲ. ಆದರೆ ಜನರ ತೆರಿಗೆಯ 6 ಕೋಟಿ ಹಣ ಮಾತ್ರ ಈಗ ಕೆರೆಯ ನೀರಲ್ಲಿ ಹೋಮ ಮಾಡಿದಂತಾಗಿದೆ. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ