ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು (Mangaluru CCB Police) 6 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಓರ್ವ ನೈಜೀರಿಯನ್ ಪ್ರಜೆಯನ್ನ ಬಂಧಿಸಿದ್ದಾರೆ.
ಮಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ. ಕದ್ರಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಪೆಡ್ಲರ್ ಹೈದರಾಲಿ ಬೆನ್ನತ್ತಿದ್ದ ಪೊಲೀಸರು, ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತೆ? ಅನ್ನೋ ಬಗ್ಗೆ ಶೋಧ ನಡೆಸಿದಾಗ ನೈಜೀರಿಯಾ ಪ್ರಜೆ ಬಗ್ಗೆ ಮಾಹಿತಿ ಗೊತ್ತಾಗಿದೆ. ಇದನ್ನೂ ಓದಿ: Mysuru Dasara | ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅಭಿಮನ್ಯು & ಟೀಂ
Advertisement
Advertisement
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನೈಜೀರಿಯಾ ಪ್ರಜೆ ಪೀಟರ್ ಇಕೇಡಿ ಬೆಲೊನು ಸಿಕ್ಕಿಬಿದ್ದಿದ್ದಾನೆ. ಈತ ಬೆಂಗಳೂರಿನ ವಿವೇಕಾನಂದ ನಗರದಲ್ಲಿ 6 ಕೆಜಿ 300 ಗ್ರಾಂನಷ್ಟು ಡ್ರಗ್ಸ್ ಸ್ಟಾಕ್ ಇಟ್ಟಿದ್ದ, ಅವಧಿ ಮೀರಿದ ವೀಸಾ ಹೊಂದಿದ್ದು, ಅಕ್ರಮವಾಗಿ ನೆಲೆಸಿದ್ದ ಅನ್ನೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಆತನನ್ನ ಬಂಧಿಸಿ, ಡ್ರಗ್ಸ್‌ಅನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೊಳಿಸುತ್ತೇವೆ: ಶಿವರಾಜ್ ಸಿಂಗ್ ಚೌಹಾಣ್
Advertisement
ಈತ ಬೆಂಗಳೂರು ನಗರದಿಂದ, ಕರ್ನಾಟಕದ ವಿವಿಧ ಭಾಗಗಳಿಗೆ ಹಾಗೂ ಬೆಂಗಳೂರು ಮೂಲಕ ಕೇರಳಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಂದು ಫ್ಲಾಟಲ್ಲಿ ಫ್ಯಾಮಿಲಿ ಇರಿಸಿ, ಇನ್ನೊಂದು ಫ್ಲಾಟಲ್ಲಿ ಡ್ರಗ್ ಸ್ಟಾಕ್ ಇಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಾಂತ್ರಿಕ ದೋಷದಿಂದ ಯಡವಟ್ಟು; ಏಕಕಾಲಕ್ಕೆ ಕ್ವಾಂಟಾಸ್ ಫ್ಲೈಟ್‌ನ ಎಲ್ಲಾ ಟಿವಿ ಸ್ಕ್ರೀನ್‌ನಲ್ಲಿ ಸೆಕ್ಸ್ ವೀಡಿಯೋ ಪ್ರಸಾರ!