– 20ಕ್ಕೂ ಹೆಚ್ಚು ಮಂದಿಗೆ ಗಾಯ
ಚಂಡೀಗಢ: ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು (School Childrens) ದಾರುಣ ಸಾವಿಗೀಡಾಗಿದ್ದು, 20ಕ್ಕೂ ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ (Haryana) ನರ್ನಾಲ್‌ನಲ್ಲಿ ಇಂದು ಬೆಳಗ್ಗೆ (ಏ.11) ನಡೆದಿದೆ.
ಜಿ.ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಶಾಲಾ ಬಸ್ ಪಲ್ಟಿಯಾಗಿದೆ (School bus Overturns). ಈದ್ ಉಲ್ ಫ್ರಿತ್ (ರಂಜಾನ್) ಹೊರತಾಗಿಯೂ ಶಾಲೆಯು ರಜೆ ಘೋಷಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಎಲ್ಲೆಲ್ಲಿ ಮದ್ಯ ಸಿಗಲ್ಲ?- ದೇಶದಲ್ಲಿ ಎಣ್ಣೆ ಸಿಗದ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ
Advertisement
Advertisement
ಪ್ರಾಥಮಿಕ ತನಿಖೆಯ ನಂತರ ಚಾಲಕನ (Bus Driver) ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ ಎಂದು ಶಂಕಿಸಿದ್ದಾರೆ.
Advertisement
ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೊಬೈಲ್ ಡೇಟಾಗೆ 500 ರೂ. ಫ್ರೀ – ಅಖಿಲೇಶ್ ಯಾದವ್ ಘೋಷಣೆ
Advertisement
6 ವರ್ಷಗಳ ಹಿಂದೆಯೇ ಅಂದ್ರೆ 2018 ರಲ್ಲಿ ಬಸ್‌ನ ಫಿಟ್‌ನೆಸ್ ಪ್ರಮಾಣಪತ್ರದ (Vehicle Fitness Certificate) ಅವಧಿ ಮುಗಿದಿದೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ.