Fashion

ಪುರುಷರಿಗಾಗಿ ಇಲ್ಲಿದೆ 6 ಸಿಂಪಲ್ ಡ್ರೆಸ್ಸಿಂಗ್ ಟಿಪ್ಸ್

Published

on

Share this

ಗಿನ ಪೀಳಿಗೆಯ ಪುರುಷರು ಡ್ರೆಸ್ಸಿಂಗ್ ಬಗ್ಗೆ ಸ್ವಲ್ಪವಾದ್ರೂ ಕಾಳಜಿ ವಹಿಸ್ತಾರೆ. ಆದ್ರೆ ಯಾವ ವಯಸ್ಸಿನಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು? ಸಂದರ್ಭಕ್ಕೆ ತಕ್ಕಂತೆ ಹೇಗೆ ಡ್ರೆಸ್ ಧರಿಸಿಬೇಕು? ದಿನನಿತ್ಯ ಹಲವಾರು ಡಿಸೈನ್ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಇದರಲ್ಲಿ ಯಾವ ಡ್ರೆಸ್ ಒಗ್ಗುತ್ತದೆ? ಶೂ ಹೇಗಿರಬೇಕು ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಅವೆಲ್ಲದಕ್ಕೆ ಉತ್ತರವಾಗಿ ಇಲ್ಲಿದೆ 6 ಡ್ರೆಸ್ಸಿಂಗ್ ಟಿಪ್ಸ್;

1. ವಯಸ್ಸಿಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳಿ
ಪಿಯುಸಿ ಮೆಟ್ಟಿಲೇರಿದಾಗ ಧರಿಸೋ ಬಟ್ಟೆಗೂ, ಡಿಗ್ರಿಗೆ ಕಾಲಿಟ್ಟಾಗ ತೊಡಬೇಕಾದ ಉಡುಗೆಗೂ ಹಾಗೂ ಆಫೀಸಿಗೆ ಹೋಗುವಾಗ ಹಾಕೋ ಉಡುಗೆಗೂ ವ್ಯತ್ಯಾಸವಿರಬೇಕು. ಕಾಲಕ್ಕೆ ತಕ್ಕಂತೆ ಹಾಗೂ ವಯಸ್ಸಿಗೆ ತಕ್ಕಂತೆ ಡ್ರೆಸ್ಸಿಂಗ್ ಇರಲಿ. ಆಯಾ ಕಾಲದ ಟ್ರೆಂಡ್‍ಗೆ ತಕ್ಕಂತೆ ಜ್ಯಾಕೆಟ್ ಹಾಗೂ ಶೂಗಳನ್ನ ಆಯ್ಕೆ ಮಾಡಿಕೊಳ್ಳಿ. ಹೆಚ್ಚಾಗಿ ಗ್ರಾಫಿಕ್ಸ್ ಅಥವಾ ಚಿತ್ರಗಳಿರುವ ಟೀ ಶರ್ಟ್‍ಗಳನ್ನ ಕಾಲೇಜಿಗೆ ಹೋಗೋ ಯುವಕರು ಹಾಕಬಹುದು. ಆದ್ರೆ ಮಧ್ಯವಯಸ್ಕರು ಪ್ಲೇನ್ ಟೀ ಶರ್ಟ್‍ಗಳನ್ನ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇನ್ನು ಆಫೀಸಿಗೆ ಹೋಗುವಾಗ ಫಾರ್ಮಲ್ಸ್ ಧರಿಸೋದು ಕಡ್ಡಾಯವಾದ್ರಿಂದ ಫಾರ್ಮಲ್ ಶರ್ಟ್ ಹಾಗೂ ಕಾಲರ್ ಇರುವ ಪೋಲೋ ಟೀ ಶರ್ಟ್‍ಗಳನ್ನ ಧರಿಸಬಹುದು.

ಇದು ಬೇಡ

2. ಯಾವ ರೀತಿಯ ಪ್ಯಾಂಟ್ ತೊಡಬೇಕು
ಹಿಂಭಾಗದಲ್ಲಿ ಜೋತು ಬೀಳುವಂತಿರೋ ಲೋ ವೇಯಿಸ್ಟ್ ಜೀನ್ಸ್ ಗಳು ಫ್ಯಾಶ್‍ನೆಬಲ್ ಎನ್ನುವುದಕ್ಕಿಂತ ನೋಡುಗರಿಗೆ ಮುಜುಗರ ಉಂಟು ಮಾಡುತ್ತದೆ. ಆದ್ದರಿಂದ ಡೀಸೆಂಟ್ ಆಗಿ ಕಾಣುವಂತೆ ಪ್ಯಾಂಟ್ ಧರಿಸಿ. ಅಲ್ಲದೆ ಅಲ್ಲಲ್ಲಿ ಹರಿದಂತೆ ಕಾಣುವ ರಿಪ್ಡ್ ಜೀನ್ಸ್/ಡಿಸ್ಟ್ರೆಸ್ಡ್ ಜೀನ್ಸ್ ಹಾಗೂ ಬೇರೆ ಬೇರೆ ಬಣ್ಣದ ಜೀನ್ಸ್ ಯುವಕರು ಧರಿಸಬಹುದು. ಫಾರ್ಮಲ್ ಲುಕ್ ಬೇಕು ಅಂತಿದ್ದರೆ ಇಂತಹ ಜೀನ್ಸ್ ಖಂಡಿತ ಧರಿಸಬೇಡಿ. ಪ್ಲೇನ್ ಜೀನ್ಸ್ ಅಥವಾ ಫಾರ್ಮಲ್ ಪ್ಯಾಂಟ್‍ಗಳನ್ನ ಧರಿಸಿ.

.

3. ಪಾದರಕ್ಷೆಯ ಬಗ್ಗೆಯೂ ಕಾಳಜಿ ಇರಲಿ
ಸಂದರ್ಭಕ್ಕೆ ತಕ್ಕಂತೆ ಚಪ್ಪಲಿ ಅಥವಾ ಶೂ – ಯಾವುದು ಧರಿಸಬೇಕು ಅನ್ನೋದನ್ನ ನಿರ್ಧರಿಸಿ. ಕಚೇರಿ ಅಥವಾ ಪಾರ್ಟಿಗಳಿಗೆ ಹೋಗುವಾಗ ಸಾಕ್ಸ್ ಮತ್ತು ಫಾರ್ಮಲ್ ಶೂ ಧರಿಸಿ. ಔಟಿಂಗ್‍ಗೆಂದು ಹೋಗುವಾಗ ಲೇಸ್ ಇರುವ ಶೂ ಅಥವಾ ಸಡಿಲವಾದ ಸ್ಲಿಪ್ ಆನ್ ಶೂ ಧರಿಸಿದ್ರೆ ಆರಾಮಾಗಿರಬಹುದು. ಅಥವಾ ಬೆಲ್ಟ್ ಚಪ್ಪಲಿ ಧರಿಸಿದ್ರೂ ಕೂಡ ಕೂಲ್ ಆಗಿರಬಹುದು. ಆದ್ರೆ ಸಾಕ್ಸ್ ಹಾಕಿಕೊಂಡು ಬೆಲ್ಟ್ ಚಪ್ಪಲಿ ಎಂದಿಗೂ ಧರಿಸಬೇಡಿ.

4. ಶರ್ಟ್/ಟಿ ಶರ್ಟ್ ಫಿಟ್ಟಿಂಗ್ ಸರಿಯಿರಲಿ
ನೀವು ಹಾಕೋ ಶರ್ಟ್ ಅಥವಾ ಟೀ ಶರ್ಟ್‍ಗಳು ನಮ್ಮ ಸೈಜಿಗೆ ಫಿಟ್ ಆಗುವಂತಿರಲಿ. ಅತಿಯಾದ ಉದ್ದನೆಯ, ಅತಿಯಾದ ಟೈಟ್ ಅಥವಾ ತುಂಬಾ ತುಂಡಗಿರುವ ಶರ್ಟ್/ ಟಿ ಶರ್ಟ್ ನಿಮ್ಮ ಲುಕ್ಕನ್ನು ಹಾಳು ಮಾಡುತ್ತವೆ.

5. ಜ್ಯಾಕೆಟ್ ಇರಲಿ
ಎಲ್ಲಾ ಸಮಾರಂಭಗಳಿಗೂ ಫಾರ್ಮಲ್ ಶರ್ಟ್ ಪ್ಯಾಂಟ್ ಧರಿಸೋ ಬದಲು ಆಗಾಗ ನಿಮ್ಮ ಉಡುಪಿಗೆ ಮತ್ತಷ್ಟು ಮೆರುಗು ನೀಡೋ ಜ್ಯಾಕೆಟ್ ಧರಿಸಿ. ಜೀನ್ಸ್ ಮತ್ತು ಬೋಟ್ ನೆಕ್ ಟೀ ಶರ್ಟ್ ಧರಿಸಿ ಅದರ ಮೇಲೊಂದು ಜ್ಯಾಕೆಟ್ ಧರಿಸಿದ್ರೆ ವಿಭಿನ್ನವಾಗಿ ಕಾಣೋದ್ರಲ್ಲಿ ಸಂಶಯವಿಲ್ಲ.

6. ಟೈಂ ನೋಡಿಕೊಳ್ಳದಿದ್ರೂ ವಾಚ್ ಕಟ್ಟಿ
ಅತ್ಯಂತ ಒಳ್ಳೆಯ ಡ್ರೆಸ್ ತೊಟ್ಟು ನಿಮ್ಮ ಕೈ ಖಾಲಿ ಖಾಲಿಯಾಗಿ ಕಂಡರೆ ಏನ್ ಚಂದ? ಹಾಗಾಗಿ ನಿಮ್ಮ ಉಡುಪಿಗೆ ಹೊಂದುವಂತ ವಾಚ್ ಕಟ್ಟಿಕೊಳ್ಳಿ. ಮೊಬೈಲ್‍ನಲ್ಲೇ ಟೈಂ ನೋಡಿಕೊಳ್ಳಬಹುದಲ್ಲ ಅಂತಿದ್ರೂ ಕೈಗೆ ಒಂದು ಕೈಗಡಿಯಾರ ಇದ್ದರೆ ಚಂದ.

 

Click to comment

Leave a Reply

Your email address will not be published. Required fields are marked *

Advertisement
Advertisement