ಬೆಂಗಳೂರು: ಹಿಂದೂ ಮುಖಂಡರ ಹತ್ಯೆಗೆ ಯತ್ನಿಸಿ ಸಿಕ್ಕಿಬಿದ್ದ ಆರು ಆರೋಪಿಗಳಿಗೂ ಈಗ ದೊಡ್ಡ ಶಾಕ್ ಆಗಿದೆ. ನಾವು ಸಿಕ್ಕೇ ಬೀಳುವುದಿಲ್ಲ ಎಂದುಕೊಂಡಿದ್ದ ಪ್ರಕರಣಗಳೆಲ್ಲಾ ಈಗ ಬೆನ್ನಿಗೆ ಬಿದ್ದಿವೆ. ಏಕೆಂದರೆ ಒಂದು ಕೇಸ್‍ನಿಂದ ಈಗ ಆರು ಪ್ರಕರಣಗಳು ರೀ-ಓಪನ್ ಆಗಿದೆ.
ಆರು ಆರೋಪಿಗಳು ಆರೋಪಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣಗಳಿಗೆ ರೂವಾರಿಯಾಗಿದ್ದರು. ಈ ಆರು ಆರೋಪಿಗಳ ಪೈಕಿ ನಾಲ್ವರು ಸಾಕಷ್ಟು ಆರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆ ಆರು ಪ್ರಕರಣದಲ್ಲಿ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣವೂ ಒಂದು. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್
ಕೊಲೆ ಯತ್ನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳು ಬೆಂಗಳೂರಿನ ಮಹಮದ್ ಖಲಿ ಎಂಬವರ ಕಾರು ಸುಟ್ಟು ಹಾಕಿದ್ದರು. ಅದರಲ್ಲೂ ಇರ್ಫಾನ್ ಖಲಿಯ ಕಾರನ್ನು ಸುಟ್ಟು ಹಾಕಿದ್ದನು. ಎಸ್‍ಡಿಪಿಐ ವಿರುದ್ಧ ಮಾತನಾಡಿದ್ದ ಖಲಿ ವಿರುದ್ಧ ಸೇಡು ತೀರಿಸಿಕೊಳ್ಳುವುದೇ ಆರೋಪಿಗಳ ಮುಖ್ಯ ಉದ್ದೇಶ ಆಗಿತ್ತು.
ಈ ಎಲ್ಲಾ ಪ್ರಕರಣದಲ್ಲೂ ಪೊಲೀಸರಿಗೆ ಸರಿಯಾದ ಸಾಕ್ಷ್ಯ ಸಿಕ್ಕದೇ ಸಿ-ರಿಪೋರ್ಟ್ ಹಾಕಿದ್ದರು. ಆರು ಪ್ರಕರಣಕ್ಕೂ ಸಾಕ್ಷ್ಯವೇ ಸಿಗದಂತೆ ಮಾಡಿ ಬಿಟ್ಟಿದ್ದರು. ಆದರೆ ಅದೃಷ್ಟ ಕೆಟ್ಟಿತ್ತು. ಈಗ ಎಲ್ಲಾ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ಜೊತೆಗೆ ಹಳೆಯ ಪ್ರಕಣಕ್ಕೂ ಜೀವ ಬಂದಿದೆ. ಎಟಿಸಿಗೆ ಪ್ರಕರಣ ವರ್ಗಾವಣೆಯಾಗಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.