ಬೆಂಗಳೂರಲ್ಲಿ ಗಂಡ-ಹೆಂಡತಿ ಹನಿಟ್ರ್ಯಾಪ್; ಕೋಟ್ಯಧಿಪತಿ ಉದ್ಯಮಿಗೆ ವಂಚನೆ – 6 ಮಂದಿ ಬಂಧನ

Public TV
1 Min Read
honey trap bengaluru

ಬೆಂಗಳೂರು: ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್‌ಗೆ (Honey Trap) ಬೀಳಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಖಲೀಮ್ ಮತ್ತು ಸಭಾ ದಂಪತಿ ಸೇರಿಕೊಂಡು ಉದ್ಯಮಿಗೆ ಗಾಳ ಹಾಕಿ ಹನಿಟ್ರ‍್ಯಾಪ್ ಮಾಡಿದ್ದರು. ಎರಡು ತಿಂಗಳ ಹಿಂದೆ ಅತಾವುಲ್ಲಾ ಎಂಬವರನ್ನು ಖಲೀಮ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕೆಲ ದಿನಗಳ ಬಳಿಕ ಅತಾವುಲ್ಲಾಗೆ ಕರೆ ಮಾಡಿ ಸಭಾಳನ್ನ ಪರಿಚಯಿಸಿದ್ದ. ಇದನ್ನೂ ಓದಿ: ನಾಳೆ ಯತೀಂದ್ರಗೆ ಟಿಪ್ಪು ಹೆಸರು ಇಟ್ಟರೂ ಅಚ್ಚರಿ ಇಲ್ಲ – ಸಿಎಂಗೆ ಬಿಜೆಪಿ ಟಾಂಗ್‌

Honeytrap

ಈಕೆ ವಿಧವೆ ಜೊತೆಯಲ್ಲಿರು ಅಂತಾ ಪರಿಚಯಿಸಿದ್ದ. ಈ ವೇಳೆ ಅತಾವುಲ್ಲಾನನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಕಳೆದ ನವೆಂಬರ್ 14 ರಂದು ಅತಾವುಲ್ಲಾಗೆ ಫೋನ್ ಮಾಡಿದ್ದ ಸಭಾ,‌ ‘ಆರ್.ಆರ್. ನಗರದ ಬಳಿ ಬಾ.. ಬರುವಾಗ ರೂಂ ಬುಕ್ ಮಾಡಲು ಆಧಾರ್ ತರುವಂತೆ’ ಹೇಳಿದ್ದಳು. ಪ್ಲ್ಯಾನ್‌ನಂತೆ ಇತ್ತ ಸಭಾ ಹಾಗು ಅತಾವುಲ್ಲಾ ಜೊತೆಯಲ್ಲಿದ್ದಾಗ ಗಂಡನ ಹನಿಟ್ರ‍್ಯಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು.

ಒಬೇದ್ ಖಾನ್ ಎಂಬಾತ ಇಬ್ಬರನ್ನ ತಡೆದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಖಲೀಮ್, ರಕೀಬ್, ಅತೀಕ್‌ನನ್ನ ಸ್ಥಳಕ್ಕೆ ಕರೆಸಿ ಧಮ್ಕಿ ಹಾಕಿದ್ದ. ನಿಮ್ಮ ವಿಚಾರ ಮನೆಯವರಿಗೆ ತಿಳಿಸುವುದಾಗಿ ಹೆದರಿಸಿ ಜೇಬಲ್ಲಿದ್ದ 4,000 ರೂ. ಹಣವನ್ನು ಗ್ಯಾಂಗ್ ಕಸಿದಿತ್ತು. ಅಲ್ಲದೆ 6 ಲಕ್ಷ ರೂ. ಹಣ ತರುವಂತೆ ಧಮ್ಕಿ ಹಾಕಿತ್ತು. ಇದನ್ನೂ ಓದಿ: ಜಾರ್ಜ್‌ ವಿರುದ್ಧ ಪೋಸ್ಟ್‌ – ತೆಲಂಗಾಣ ಮಾಜಿ ಪಾಲಿಕೆ ಸದಸ್ಯನ ಪುತ್ರ ಅರೆಸ್ಟ್‌

ಹೈಡ್ರಾಮಾ ನಡೆಯುವಾಗಲೇ ಸಿಸಿಬಿ ಮಧ್ಯ ಪ್ರವೇಶಿಸಿದೆ. ಸಭಾ ಹಾಗೂ ಖಲೀಮ್ ದಂಪತಿಯ ಹನಿಟ್ರ‍್ಯಾಪ್ ಪ್ಲ್ಯಾನ್‌ ಬಯಲಿಗೆಳೆದಿದೆ. ಸದ್ಯ ಪ್ರಕರಣ ಸಂಬಂಧ ಆರ್.ಆರ್. ನಗರ ಪೊಲೀಸರು, ದಂಪತಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

Share This Article