ಬೆಂಗಳೂರು: ಸ್ಯಾಂಡಲ್‍ವುಡ್‍ನ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿ ಆದಿ ಮತ್ತು ನಿಧಿಮಾ ಪಾತ್ರದಲ್ಲಿ ಕ್ಯೂಟ್ ಜೋಡಿಯಾಗಿ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದರು. ಇದೀಗ ಆದಿ ಮತ್ತು ನಿಧಿಯಾ ಮಿಲನಕ್ಕೆ ಆರು ವರ್ಷಗಳು ಕಳೆದಿದ್ದು, ಈ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ತಮ್ಮ ಜರ್ನಿಯನ್ನು ಶುರು ಮಾಡಿ ಮೇ 18ಕ್ಕೆ ಆರು ವರ್ಷವಾಗಿದೆ. ಅಂದರೆ ಇಬ್ಬರೂ ಒಟ್ಟಿಗೆ ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ನಂತರ ‘ಚಾರ್ಲಿ’ ಸಿನಿಮಾದಲ್ಲೂ ಕೂಡ ಮಿಲನಾ ಮತ್ತು ಕೃಷ್ಣ ಒಟ್ಟಿಗೆ ನಟಿಸಿದ್ದರು. ಇತ್ತೀಚೆಗೆ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿಯೂ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದಾರೆ. ಹೀಗಾಗಿ ಇವರ ಸಿನಿಮಾ ಜರ್ನಿ ಶುರುವಾಗಿ ಆರು ವರ್ಷಗಳು ಕಳೆದಿವೆ.
ಈ ಹಿನ್ನೆಲೆಯಲ್ಲಿ ಡಾರ್ಲಿಂಗ್ ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ಜೊತೆಗಿರುವ ಆರು ಫೋಟೋಗಳನ್ನು ಫೋಸ್ಟ್ ಮಾಡುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ “ನಾವು ಒಟ್ಟಿಗೆ ಆರು ವರ್ಷಗಳನ್ನು ಕಳೆದಿದ್ದೇವೆ. ಈ ಆರು ವರ್ಷಗಳಲ್ಲಿ ಕಷ್ಟ, ನೋವು, ಬೇಸರ ಎಲ್ಲವನ್ನು ನೋಡಿದ್ದೇವೆ. ಮೊದಲ ಐದು ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಯಾವುದೂ ಚೆನ್ನಾಗಿರಲಿಲ್ಲ. ಆದರೆ ವೈಯಕ್ತಿಕವಾಗಿ ಅದು ಅತ್ಯುತ್ತಮ ದಿನಗಳು. ಆ ದಿನಗಳು ನನಗೆ ಜೀವನದಲ್ಲಿ ಅದ್ಭುತ ಪಾಠಗಳನ್ನು ಕಲಿಸಿದವು” ಎಂದು ಕೃಷ್ಣ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಜೀವನದಲ್ಲಿ ಸಂತೋಷವಾಗಿದ್ದರೆ ವೃತ್ತಿ ಬದುಕಿನಲ್ಲಿ ಏನೇ ಆದರೂ ಆತ ಸಂತೋಷದಿಂದ ಇರಬಲ್ಲ ಎಂಬುದನ್ನು ನನಗೆ ತೋರಿಸಿದೆ. ನಾವು ಒಟ್ಟಿಗೆ ಹೋರಾಡಿದ್ದೇವೆ. ಒಟ್ಟಿಗೆ ಕೆಲಸ ಮಾಡಿದ್ದೇವೆ. ಹಾಗೆಯೇ ಒಟ್ಟಿಗೆ ಯಶಸ್ಸನ್ನು ಸಂಭ್ರಮಿಸಿದ್ದೇವೆ ಎಂದು ಮಿಲನಾ ಅವರೊಂದಿಗಿನ ಜರ್ನಿಯನ್ನು ಸುಂದರವಾಗಿ ಬರೆದುಕೊಂಡಿದ್ದಾರೆ.
https://www.instagram.com/p/CAUoq1WAJEc/?igshid=1lm8l0fjzotzk
ನಾನು ನಿನ್ನೊಂದಿಗೆ ಸಾಗಿರುವುದು ಸಣ್ಣ ಪ್ರಯಾಣದಲ್ಲಿ ಮಾತ್ರ, ಇನ್ನೂ ಬಹಳ ದೂರ ಸಾಗುವುದು ಇದೆ. ಈ ನಮ್ಮ ಪ್ರಯಾಣ ಬಹಳ ಸುದೀರ್ಘವಾಗಿರಬೇಕು ಎಂದು ನಾನು ಬಯಸುತ್ತೇನೆ. ಎಷ್ಟು ಸುರ್ದೀಘ ಎಂದರೆ ಅದಕ್ಕೆ ಅಂತ್ಯವೇ ಇರಬಾದರು. ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಕೃಷ್ಣ ಪ್ರೀತಿಯಿಂದ ಹೇಳಿದ್ದಾರೆ.
‘ಲವ್ ಮಾಕ್‍ಟೇಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಈ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದರು. ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟವಿತ್ತು. ಇವರಿಬ್ಬರು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿ ಜರ್ನಿಯೇ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿತ್ತು.