ಆ್ಯಂಟಿಗಾ: ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ 6 ಬಾಲ್ ಗೆ 6 ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Advertisement
ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರಾನ್ ಪೋಲಾರ್ಡ್ ಶ್ರೀಲಂಕಾದ ಬೌಲರ್ ಅಖಿಲ ಧನಂಜಯ್ ಬೌಲಿಂಗ್ ನಲ್ಲಿ 6 ಬಾಲ್ ಗೆ 6 ಸಿಕ್ಸರ್ ಸಿಡಿಸುವ ಮೂಲಕ, ಅಂತರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್ ನಂತರ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
2007 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್ ನ ಬಾಲರ್ ಫ್ಲಿಂಟಾಪ್ ಅವರ 6 ಎಸೆತವನ್ನು ಸಿಕ್ಸರ್ ಗಟ್ಟಿ ದಾಖಲೆ ನಿರ್ಮಿಸಿದ್ದರು, ಆ ಬಳಿಕ ಹರ್ಷಲ್ ಗಿಬ್ಸ್ ನೆದರ್ ಲ್ಯಾಂಡ್ ವಿರುದ್ಧ 6 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.
Advertisement
Advertisement
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಪೋಲಾರ್ಡ್ ಮೊದಲು ಫಿಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ಅವರ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳು ಶ್ರೀಲಂಕಾವನ್ನು 131 ರನ್ ಗಳಿಗೆ ಕಟ್ಟಿಹಾಕಿತು.
132 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ 3,1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ಗಳಿಸಿತ್ತು ಈ ಹಂತದಲ್ಲಿ ದಾಳಿಗಿಳಿದ ಅಖಿಲ ಧನಂಜಯ ಲೂಯಿಸ್, ಗೇಲ್ ಮತ್ತು ಪೂರನ್ ಅವರ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ನಂತರ ಬ್ಯಾಟಿಂಗ್ ಇಳಿದ ಟಿ-20 ಸ್ಪೇಷಲಿಷ್ಟ್ ಬ್ಯಾಟ್ಸ್‍ಮ್ಯಾನ್ ಕೀರಾನ್ ಪೊಲಾರ್ಡ್ ಅಖಿಲ ಧನಂಜಯ ಅವರ ಆರನೇ ಓವರ್ ನ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್ ಗಟ್ಟಿ ಅಬ್ಬರಿಸಿದರು. ಪೊಲಾರ್ಡ್ 38 ರನ್ (11 ಎಸೆತ, 6 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 13.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳನ್ನು ಚೆಸ್ ಮಾಡಿ ಪಂದ್ಯವನ್ನು ಗೆದ್ದುಕೊಂಡಿದೆ.