ಮಂಡ್ಯ: ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 6 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಮಂಡ್ಯದ ಮಿಮ್ಸ್ ನಡೆದಿದೆ.
Advertisement
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರಂಜಿತಾ (24) ಸಾವನ್ನಪ್ಪಿರುವ ಗರ್ಭಿಣಿ. ಕಳೆದ ಹತ್ತು ದಿನಗಳ ಹಿಂದೆ ರಂಜಿತಾ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ರಂಜಿತಾ ಸಾವನ್ನಪ್ಪಿದ್ದಾರೆ.
Advertisement
ಇನ್ನೇನು ಕೆಲತಿಂಗಳ ಬಳಿಕ ಮಗುವಿನ ನಿರೀಕ್ಷೆಯಲ್ಲಿ ಇದ್ದ ಕುಟುಂಬಕ್ಕೆ ರಂಜಿತಾ ಸಾವನ್ನಪ್ಪಿರುವುದು ಆಘಾತ ಉಂಟುಮಾಡಿದೆ.
Advertisement