ಮುಂಬೈ: ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಸೇರಿದಂತೆ ಭಾರತ 6 ಮಂದಿ ಯುವ ಆಟಗಾರರ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಐಪಿಎಲ್ ಸೇರಿದಂತೆ, ರಣಜಿ ಪಂದ್ಯಗಳಲ್ಲಿಯೂ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಆತನ ಆಯ್ಕೆ ಖಚಿತ ಎಂದು ಹಲವು ಮಾಜಿ ಆಟಗಾರರು ಊಹೆ ಮಾಡಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಸೂರ್ಯ ಅವರಿಗೆ ಅವಕಾಶ ನೀಡಿರಲಿಲ್ಲ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದ ಕುರಿತು ಹಲವರು ಚರ್ಚೆ ನಡೆಸಿದ್ದರು.
Advertisement
Advertisement
ಇದೇ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಕುರಿತು ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ, ಆತನ ಸಮಯ ಬರುತ್ತದೆ ಎಂದು ಹೇಳಿದ್ದಾರೆ. 2018 ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ 14 ಪಂದ್ಯಗಳನ್ನಾಡಿದ್ದ ಸೂರ್ಯಕುಮಾರ್ ಯಾದವ್ 512 ರನ್ ಗಳಿಸಿದ್ದರು. 2019ರಲ್ಲಿ 16 ಪಂದ್ಯಗಳೊಂದಿಗೆ 424 ರನ್ ಹಾಗೂ 2020ರ ಟೂರ್ನಿಯಲ್ಲಿ 400* ರನ್ ಗಳಿಸಿದ್ದಾರೆ. ಇದನ್ನೂ ಓದಿ: ಅರ್ಧಶತಕ ಸಿಡಿಸಿ 2 ದಾಖಲೆ ನಿರ್ಮಿಸಿದ ಪಡಿಕ್ಕಲ್
Advertisement
ಸೂರ್ಯಕುಮಾರ್ ಯಾದವ್ ಅವರೊಂದಿಗೆ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಕೋಲ್ಕತ್ತಾ ತಂಡದ ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶುಭಮನ್ ಗಿಲ್, ಬೆಂಗಳೂರು ತಂಡದ ಆರಂಭಿಕ ದೇವ್ದತ್ ಪಡಿಕ್ಕಲ್ ರಂತಹ ಆಟಗಾರರನ್ನು ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement
ಸಂಜು ಸ್ಯಾಮ್ಸನ್, ವರುಣ್ ಚಕ್ತವರ್ತಿ ಆಸ್ಟ್ರೇಲಿಯಾ ಟೂರ್ನಿಯ ಟಿ20 ಸರಣಿಗೆ ಆಯ್ಕೆಯಾಗಿದ್ದು, ಚಕ್ರವರ್ತಿ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಇತ್ತ ಬೆಂಗಳೂರು ತಂಡದ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದು, 14 ಪಂದ್ಯಗಳಲ್ಲಿ 472 ರನ್ ಗಳಿಸಿದ್ದಾರೆ. ಆ ಮೂಲಕ 2020ರ ಐಪಿಎಲ್ ಟೂರ್ನಿಯ ಉದಯೋನ್ಮುಖ ಆಟಗಾರರ ಪಟ್ಟಿಯ ರೇಸ್ನಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ತ್ರಿಪಾಠಿ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ, ದೇಶ ಹೆಮ್ಮೆ ಪಡುವಂತೆ ಆಡುತ್ತೇನೆ: ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ರಾಹುಲ್