Connect with us

Latest

6ರ ಪೋರನಿಗೆ ಸಿಕ್ಸ್ ಪ್ಯಾಕ್- ಆರ್ತ್ ಹುಸೈನಿ ವರ್ಕೌಟ್‍ಗೆ ನೆಟ್ಟಿಗರು ಫಿದಾ

Published

on

ಟೆಹರಾನ್: ಕೊರೊನಾ ಲಾಕ್‍ಡೌನ್‍ನಿಂದಾಗಿ ಹೆಚ್ಚಿನ ಜನರು ಸಾಮಾಜಿಕ ಜಾಲತಾನದಲ್ಲಿ ಆಕ್ಟೀವ್ ಆಗಿದ್ದಾರೆ. ಆರು ವರ್ಷದ ಪೋರ ಆರ್ತ್ ಹುಸೈನಿ ಸಿಕ್ಸ್ ಪ್ಯಾಕ್ ಹಾಗೂ ವರ್ಕೌಟ್‍ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಇರಾನ್‍ನ ಬಾಬೋಲ್ ನಗರದಲ್ಲಿ ವಾಸಿಸುತ್ತಿರುವ ಆರ್ತ್ ಹುಸೈನಿ ಸಿಕ್ಸ್ ಪ್ಯಾಕ್, ವರ್ಕೌಟ್ ಹಾಗೂ ಸ್ಟಂಟ್‍ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಆರ್ತ್ ಹುಸೈನಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಆರ್ತ್ ಪ್ರತಿಯೊಂದು ಪೋಸ್ಟ್ ಗೂ 10 ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆಯುತ್ತಾರೆ.

ಆರ್ತ್ ತಂದೆ ಮೊಹಮ್ಮದ್ ಅವರು ಮಗನಿಗೆ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿಯನ್ನು ಪ್ರಾರಂಭಿಸಿದರು. ಆರ್ತ್ ತನ್ನ 9 ತಿಂಗಳ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್ ಮಾಡಲು ಆರಂಭಿಸಿದ್ದ. ಎರಡನೇ ವರ್ಷಕ್ಕೂ ಮುನ್ನವೇ ಬಾಲಕ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದ. ಸದ್ಯ ಸಿಕ್ಸ್ ಪ್ಯಾಕ್ ನಿಂದ ನೆಟ್ಟಿಗರ ಮನ ಗೆದ್ದಿದ್ದಾನೆ.

ಆರ್ತ್ ಇಂಗ್ಲೆಂಡ್‍ನ ಲಿವರ್‍ಪೂಲ್ ಅಕಾಡೆಮಿಯಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ. ಮಗನಲ್ಲಿನ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿದ ಮೊಹಮ್ಮದ್ ಅವರು ಆರ್ತ್ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಬಾಲಕ ಜಿಮ್ನಾಸ್ಟಿಕ್ಸ್, ವರ್ಕೌಟ್ ನೋಡಿದ ಲಕ್ಷಾಂತರ ನೆಟ್ಟಿಗರು ಆತನನ್ನು ಫಾಲೋ ಮಾಡಲು ಆರಂಭಿಸಿದರು.

ಮೊಹಮ್ಮದ್ ಅವರು ಮಗನಿಂದ ಹಣ ಸಂಪಾದಿಸಲು ಹೀಗೆ ಮಾಡುತತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮೊಹಮ್ಮದ್, ಮಗ ಯಾವಾಗಲೂ ಅಥ್ಲೆಟಿಕ್ಸ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುತ್ತಾನೆ. ಅವನ ಇಷ್ಟದ ವಿಷಯಗಳಲ್ಲಿ ನಾನು ತಂದೆಯಾಗಿ ಮಾತ್ರ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಲಿಯೋನೆಲ್ ಮೆಸ್ಸಿಯ ಅಭಿಮಾನಿ:
ಆರ್ತ್ ವಾಲ್ ಕ್ಲೈಂಬಿಂಗ್ ಕಲೆಯಲ್ಲೂ ಪರಿಣತಿ ಹೊಂದಿದ್ದಾರೆ. ಈಗ ಅವರ ಕನಸು ಬೆಳೆದು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪರ ಆಡವುದಾಗಿದೆ. ಆರ್ತ್ ಅವರ ನೆಚ್ಚಿನ ಆಟಗಾರರಲ್ಲಿ ಲಿಯೋನೆಲ್ ಮೆಸ್ಸಿ ಕೂಡ ಒಬ್ಬರಾಗಿದ್ದು, ಅವರಂತೆ ಆಡಲು ಬಯಸಿದ್ದಾರೆ.

Click to comment

Leave a Reply

Your email address will not be published. Required fields are marked *