ಬೆಂಗಳೂರು: 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ (Public Exam) ರದ್ದುಗೊಳಿಸಿ ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಶೇಷ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.
ಈಗಾಗಲೆ 13ನೇ ತಾರೀಖಿನಿಂದ 5 ಮತ್ತು 8 ನೇ ತರಗತಿಯ ಪರೀಕ್ಷೆ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಶಾಲೆಗಳಿಂದ ಸುತ್ತೋಲೆ ಹೋಗಿದೆ. ಏಕ ಸದಸ್ಯ ಪೀಠದ ಆದೇಶ ಪಾಲಿಸಿದರೆ ಮಕ್ಕಳಲ್ಲಿ ಅಷ್ಟೊಂದು ಗೊಂದಲವಾಗುತ್ತಿರಲಿಲ್ಲ. ಯಾವಾಗ ಸರ್ಕಾರದ ಮೇಲ್ಮನವಿ ಹೋಯಿತೋ ಅಲ್ಲಿಂದ ಪರೀಕ್ಷೆ ಇದೆಯೋ ಇಲ್ಲವೋ ಎನ್ನುವ ಗೊಂದಲ ಉಂಟಾಗಿದೆ. ಇದನ್ನೂ ಓದಿ: ಮೋದಿ ಬಂದ ಬೆನ್ನಲ್ಲೇ ಅಖಾಡಕ್ಕಿಳಿದ ಎಚ್ಡಿಡಿ – ಮಂಡ್ಯ ನಾಯಕರಿಗೆ ಖಡಕ್ ಸೂಚನೆ
Advertisement
Advertisement
ಈಗಾಗಲೇ ಸರ್ಕಾರ ಈ ಆದೇಶಕ್ಕೆ ತಡೆ ಕೊಡುವಂತೆ ವಿಶೇಷ ಪೀಠದಲ್ಲಿ ಮನವಿ ಸಲ್ಲಿಸಿದರೂ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ಕೊಟ್ಟಿಲ್ಲ. ಸರ್ಕಾರ ಹಠಮಾರಿ ಧೋರಣೆ ತಾಳಿ ಪರೀಕ್ಷೆ ನಡೆಸಿದ್ದೇ ಆದಲ್ಲಿ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇದೀಗ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸದಿರುವ ಸಾಧ್ಯತೆಯಿದೆ. ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್ಗೆ ದೇಣಿಗೆ ನೀಡಿದ ಮತದಾರರು