ನವದೆಹಲಿ: ಭಾರತದ ಅತ್ಯಂತ ವೇಗದ 5ಜಿ ನೆಟ್‌ವರ್ಕ್ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮಂಗಳವಾರ ಪ್ರಾರಂಭವಾಗಿದೆ. ಮೊದಲ ದಿನವೇ ಹರಾಜಿನ 4 ಸುತ್ತುಗಳಲ್ಲಿ ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ. ಮೀರಿದೆ.
ಇಂದು 5ಜಿ ಹರಾಜಿನ ಮೊದಲ ದಿನವಾಗಿದ್ದು, 4 ಸುತ್ತುಗಳ ಕೊನೆಯಲ್ಲಿ ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ. ಮೀರಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?
Advertisement
Advertisement
ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಹಾಗೂ ವಿ(ವೊಡಾಫೋನ್ ಐಡಿಯಾ) ಕಂಪನಿಗಳು ಭಾಗವಹಿಸಿವೆ. 5ನೇ ಸುತ್ತಿನ ಹರಾಜು ಬುಧವಾರ ನಡೆಯಲಿದೆ. ಇದನ್ನೂ ಓದಿ: ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ
Advertisement
ಇಂದು ಪ್ರಾರಂಭವಾದ ಹರಾಜು ಪ್ರಕ್ರಿಯೆ ಆಗಸ್ಟ್ 1 ರೊಳಗೆ ಪೂರ್ಣಗೊಳಿಸಲು ಕೇಂದ್ರ ಆದೇಶಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]