ನವದೆಹಲಿ: ಶೀಘ್ರವೇ 5ಜಿ ಸ್ಪೆಕ್ಟ್ರಂ ಹರಾಜು ನಡೆಯಲಿರುವ ಕಾರಣ 5ಜಿ ನೆಟ್ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಏಳುವುದು ಸಹಜ.
4ಜಿ ಸ್ಪೀಡ್‌ಗಿಂತ 5ಜಿ ಯಲ್ಲಿ ವೇಗ ಹೆಚ್ಚಿರುವ ಕಾರಣ ನಿರೀಕ್ಷೆಯಂತೆ ಬೆಲೆ ಹೆಚ್ಚಿರಲಿದೆ. ಈಗಿನ ಬೆಲೆಗೆ ಹೋಲಿಸಿದರೆ ಶೇ.10 – 20 ರಷ್ಟು ಬೆಲೆ ಹೆಚ್ಚಳವಾಗಬಹುದು ಎಂದು ಈ ಕ್ಷೇತ್ರದ ತಜ್ಞರು ತಿಳಿಸಿದ್ದಾರೆ.
Advertisement
ಡೇಟಾ ಬೆಲೆ ಏರಿಕೆಯಂತೆ 5 ಜಿ ಫೋನ್ ಬೆಲೆಯೂ ಏರಿಕೆಯಾಗಲಿದೆ. ಕಡಿಮೆ ಬೆಲೆಯ ಗುಣಮಟ್ಟದ 5ಜಿ ಫೋನುಗಳು 15 ಸಾವಿರ – 20 ಸಾವಿ ರೂ. ಒಳಗಡೆ ಇರಬಹುದು ಎಂದು ಮಾಧ್ಯಮ ವರದಿ ಮಾಡಿದೆ.
Advertisement
Advertisement
ಆರಂಭಿಕ ಹಂತದಲ್ಲಿ 5ಜಿ ನೆಟ್‌ವರ್ಕ್ ನಗರ ಪ್ರದೇಶದಲ್ಲಿ ಲಭ್ಯವಾಗಲಿದೆ. ಹಂತ ಹಂತವಾಗಿ ಉಳಿದ ಭಾಗದಲ್ಲಿ ನೆಟ್‌ವರ್ಕ್ ನೀಡಲು ಟೆಲಿಕಾಂ ಕಂಪನಿಗಳು ಮುಂದಾಗಿವೆ. ಇದನ್ನೂ ಓದಿ: ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ
Advertisement
ಆದರೆ ಟೆಲಿಕಾಂ ಕಂಪನಿಗಳ ಮೂಲಗಳು ದರ ಹೆಚ್ಚಳ ಇರವುದಿಲ್ಲ ಎಂದು ಹೇಳಿವೆ. ಆರಂಭದಲ್ಲಿ 4ಜಿಯಷ್ಟೇ ದರ ಇರಲಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು 5ಜಿಗೆ ಸೇರ್ಪಡೆಯಾದ ಬಳಿಕ ದರ ಹೆಚ್ಚಾಗಬಹುದು ಎಂದು ಎಂದು ಹೇಳಿವೆ.
ವಿಶ್ವದ ಮಾರುಕಟ್ಟೆಗೆ ಹೋಲಿಸಿದರೆ ಭಾರತ ದರ ಅಗ್ಗವಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಟೆಲಿಕಾಂ ಕಂಪನಿಗಳು 4ಜಿ/3ಜಿ ವೇಗದ ಇಂಟರ್‌ನೆಟ್ ಸೇವೆಯನ್ನು ನೀಡುತ್ತಿವೆ.