ನವದೆಹಲಿ: ಭಾರತದಲ್ಲಿ ಭಾರೀ ನಿರೀಕ್ಷೆ ಹೊಂದಿರುವ 5ಜಿ ನೆಟ್‌ವರ್ಕ್ ಕೊನೆಗೂ 2022ರ ವೇಳೆ ಹೊರಹೊಮ್ಮಲಿದೆ ಎಂದು ದೂರಸಂಪರ್ಕ ಇಲಾಖೆ ಸೋಮವಾರ ದೃಢಪಡಿಸಿದೆ. ಆರಂಭದಲ್ಲಿ ದೇಶಾದ್ಯಂತ 13 ನಗರಗಳಲ್ಲಿ 5ಜಿ ನೆಟ್ ವರ್ಕ್ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಬೆಂಗಳೂರು ಸೇರಿದಂತೆ ಮೆಟ್ರೋ ನಗರಗಳಾದ ಅಹಮದಾಬಾದ್, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲು ಲಭ್ಯವಾಗಲಿದೆ. ಇದನ್ನೂ ಓದಿ: ನಾಳೆಯಿಂದ ಜ.4ರ ವರೆಗೆ ರಾತ್ರಿ 10 ಗಂಟೆಯಿಂದ ಎಲ್ಲಾ ಫ್ಲೈಓವರ್ ಕ್ಲೋಸ್: ಕಮಲ್ ಪಂಥ್
Advertisement
Advertisement
ಈ ವರ್ಷದ ಆರಂಭದಲ್ಲಿ ಏರ್‌ಟೆಲ್, ಜಿಯೋ ಹಾಗೂ ವಿಐ ಟೆಲಿಕಾಂ ಕಂಪನಿಗಳು 5ಜಿ ಪ್ರಯೋಗಗಳನ್ನು ನಡೆಸಿದ್ದವು. ಇದೀಗ 224 ಕೋಟಿ ರೂ. ವೆಚ್ಚದಲ್ಲಿ ಈ ವರ್ಷದ ಕೊನೆಯಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
Advertisement
5ಜಿ ತಂತ್ರಜ್ಞಾನ ಡೇಟಾ ಡೌನ್‌ಲೋಡ್ ವಿಷಯದಲ್ಲಿ ಸುಧಾರಿತವಾಗಿ ಬಳಕೆದಾರರಿಗೆ ಅನುಭವ ನೀಡಲಿದೆ. ಅಂದರೆ 5ಜಿ ನೆಟ್‌ವರ್ಕ್ 4ಜಿ ಗಿಂತಲೂ 10 ಪಟ್ಟು ಹೆಚ್ಚು ವೇಗದ ಅನುಭವ ನೀಡುವ ನಿರೀಕ್ಷೆ ಇದೆ. ಇದನ್ನೂ ಓದಿ: ಗುಲಾಬ್ ಜಾಮೂನ್ ಸಮೋಸ ಸವಿದ ವ್ಯಕ್ತಿ – ರಿಯಾಕ್ಟ್ ಮಾಡಿದ್ದೇಗೆ ಗೊತ್ತಾ?
Advertisement
ದೇಶದಲ್ಲಿ ಆರೋಗ್ಯ, ದೂರಸಂಪರ್ಕ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಗಳಂತಹ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಪ್ರಾರಂಭವಾಗಲಿದೆ. 5ಜಿ ಸೇವೆ ಮೊದಲಿಗೆ ಈ 13 ನಗರಗಳಲ್ಲಿ ಪ್ರಾರಂಭವಾಗಿ ನಂತರ ದೇಶಾದ್ಯಂತ ಲಭ್ಯವಾಗಲಿದೆ.