ವಿಜಯಪುರ: ಕೇವಲ ಮಲೆನಾಡಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಮತ್ಸ್ಯಮೇಳ ಇದೀಗ ಗುಮ್ಮಟ ನಗರಿ ವಿಜಯಪುರಕ್ಕೆ ಲಗ್ಗೆಯಿಟ್ಟಿದೆ. 123 ವಿವಿಧ ಜಾತಿಗಳ ಮೀನುಗಳು ಮತ್ಸ್ಯಮೇಳದಲ್ಲಿ ಪ್ರದರ್ಶಿಸಲಾಗಿದ್ದು, 20 ರೂ.ಗಳ ಸ್ವದೇಶಿ ಮೀನುಗಳಿಂದ 5 ಲಕ್ಷ ರೂ.ಗಳ ವಿದೇಶಿ ಮೀನುಗಳು ಸಹ ಇಲ್ಲಿ ಕಾಣಸಿಗುತ್ತಿವೆ.
ವಿಜಯಪುರ ಜಿಲ್ಲಾ ಪಂಚಾಯತಿ ಹಾಗೂ ಮೀನುಗಾರಿಕೆ ಇಲಾಖೆಯಿಂದ ನಗರದ ಅಂಬೇಡ್ಕರ್ ಕ್ರೀಡಾಂಗಣದ ಬಳಿ ಇರುವ ಆನ್‍ಲೈನ್ ಟ್ರೇಡಿಂಗ್ ಮಾರುಕಟ್ಟೆ ಸಭಾಂಗಣದಲ್ಲಿ ಈ ಮತ್ಸ್ಯ ಮೇಳ ಆಯೋಜಿಸಲಾಗಿದೆ. ಸಭಾಂಗಣದ ಬಳಿ ಎಲ್ಲಿ ನೋಡಿದರು ಝಗಮಗಿಸುವ ಲೈಟಿಂಗ್ಸ್, ಕಲರಫುಲ್ ಮೀನುಗಳು. ಈ ಮತ್ಸ್ಯಮೇಳ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದು, ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ.
Advertisement
Advertisement
ಪ್ರದರ್ಶನದಲ್ಲಿ ನಮ್ಮ ದೇಶದ ಅತೀ ಕಡಿಮೆ ಎಂದರೆ 20 ರೂ.ನಿಂದ ವಿದೇಶದ ಅತೀ ಹೆಚ್ಚು ಅಂದರೆ 5 ಲಕ್ಷ ರೂ. ಬೆಲೆ ಬಾಳುವ ಮೀನುಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರ ಬೆಲೆ ತೂಕದ ಆಧಾರ ಮೇಲೆ ಸಹ ಹೆಚ್ಚಾಗುತ್ತ ಹೋಗುತ್ತದೆ. ಈ ಭಾಗದ ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಈ ಮತ್ಸ್ಯಮೇಳವನ್ನು ವಿಜಯಪುರದಲ್ಲಿ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ಕಿರಣ ತಿಳಿಸಿದರು.
Advertisement
Advertisement
ಸ್ವದೇಶಿ ಮೀನುಗಳಾದ ಗೋಲ್ಡ್ ಫಿಶ್, ಟೆಟ್ರಾ, ರೇನಬೋಫಿಶ್, ವೈಟ್ ಆ್ಯಂಡ್ ಬ್ಲಾಕ್ ಶಾರ್ಕ್, ರೆಡೆ ಕ್ಯಾಪ್ ಆರಂಡಾ, ಎಂಜೆಲ್ ಫಿಶ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿದೇಶಿ ಮೀನುಗಳಾದ ಎರಡು ಲಕ್ಷ ರೂ. ಮೌಲ್ಯದ ಪ್ಲಾಟಿನಮ್ ಅಲಿಗೆಟರ್ ಗಾರ್, ಸಿಂಗಪೂರ ಗ್ರೀನ್ ಟುರ್ಟೆಲ್, ಐದು ಲಕ್ಷ ರೂ.ನ ಡೈಮಂಡ್ ಸ್ಟಿಂಗ್ ರಾಯ್, ಲಿಯೋಪರ್ಡ್ ಡಿಸ್ಕೂಸ್, ರೆಡ್ ಬಲ್ಡ್ ಡಿಸ್ಕೂಸ್ ಮೀನುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮತ್ಸ್ಯಮೇಳವನ್ನು ನೋಡಲು ವಿಜಯಪುರ ಜಿಲ್ಲೆಯ ಮೂಲೆಮೂಲೆಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರುಆಗಮಿಸುತ್ತಿದ್ದಾರೆ. ಬರದ ನಾಡಿಲ್ಲಿ ವಿವಿಧ ಪ್ರಭೇದದ ಮೀನುಗಳನ್ನು ಕಂಡು ಸಂತೋಷ ಪಟ್ಟಿದ್ದಾರೆ.