ಬೆಂಗಳೂರು: ವಿಶೇಷ ಚೇತನರಿಗೆ ಬೆಂಗಳೂರು ಜಿಲ್ಲಾಡಳಿತದಿಂದ ಸಿಹಿ ಸುದ್ದಿಯೊಂದು ಬಂದಿದೆ.
ಮನೆಯಿಂದ ಹೊರ ಹೋಗೋಕೆ ಆಗೋದಿಲ್ಲ, ಆಧಾರ್ ಕಾರ್ಡ್ ಇಲ್ಲ ಅಂತಿದ್ರೆ ಚಿಂತೆ ಬಿಡಿ. ಕರೆದೊಯ್ಯಲು ಸಹಾಯಕ್ಕೆ ಯಾರೂ ಬರಲಿಲ್ಲ ಎಂಬ ಕೊರಗು ಕೂಡ ನಿಮಗೆ ಬೇಡ. ನಿಮಗೆ ವ್ಯಾಕ್ಸಿನ್ ಲಸಿಕೆ ಕೊಡಿಸಲು ಮುಂದಾಗಿದೆ ಜಿಲ್ಲಾಡಳಿತ. ಅಲ್ಲದೆ ಅನಾಥ ಆಶ್ರಮಗಳಲ್ಲಿನ ವಯೋ ವೃದ್ದರ ಸಹಾಯಕ್ಕೆ ನಿಂತಿದೆ ಬೆಂಗಳೂರು ಜಿಲ್ಲಾಡಳಿತ. ವಿಕಲ ಚೇತನರ ಮ್ಯಾಪಿಂಗ್ ಮಾಡಿ ಅಧಿಕಾರಿಗಳು ಲಸಿಕೆ ಹಾಕಿಸ್ತಿದ್ದಾರೆ.
Advertisement
Advertisement
ಪಂಚಾಯ್ತಿ, ರೆವಿನ್ಯೂ ಹಾಗೂ ಹೆಲ್ತ್ ಆಫೀಸರ್ಸ್ ನಿಂದ ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿಶೇಷ ಚೇತನರು ಬರೋಬ್ಬರಿ 59 ಸಾವಿರ ಮಂದಿ ಇದ್ದಾರೆ. ಅದರಲ್ಲಿ 45 ವರ್ಷ ಮೇಲ್ಪಟ್ಟವರು ಬರೋಬ್ಬರಿ 19,911 ಮಂದಿ ಇಷ್ಟು ಮಂದಿಯ ಮ್ಯಾಪಿಂಗ್ ಮಾಡಿ ಅವರಿರೋ ಸ್ಥಳಕ್ಕೆ ವಾಹನ ವ್ಯವಸ್ಥೆ ಮಾಡಿ, ವಿಶೇಷ ಚೇತನರಿರೋ ಮನೆ ಮನೆಗೆ ತೆರಳಿ ತಮ್ಮ ವಾಹನದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಜಿಲ್ಲಾಡಳಿತ ಲಸಿಕೆ ಹಾಕಿಸ್ತಿದೆ.
Advertisement
Advertisement
ಒಂದು ವೇಳೆ ಆಧಾರ್ ಕಾರ್ಡ್ ಇಲ್ದಿದ್ರೂ ಡೋಂಟ್ ವರಿ. ವಾಕ್ಸಿನ್ ಹಾಕಿಸಿಕೊಳ್ಳಲು ಜಿಲ್ಲಾಡಳಿತವೇ ತಾತ್ಕಾಲಿಕ ಐಡಿ ಕಾರ್ಡ್ ನೀಡಲಿದೆ. ಇದಲ್ಲದೆ ಆಶ್ರಮಗಳಲ್ಲಿರೊ ವಯೋ ವೃದ್ಧರಿಗೆ ಆಧಾರ್ ಕಾರ್ಡ್ ಇಲ್ದಿದ್ರೂ ಐಡಿ ಕಾರ್ಡ್ ಕೊಟ್ಟು ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.