ಬೆಂಗಳೂರು: 57 ಗಂಟೆಗಳ ವೀಕೆಂಡ್ ಕರ್ಫ್ಯೂ ಅಂತ್ಯವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾ ವಲಸೆ ಆರಂಭವಾಗಿದೆ. ನಗರದ ಎಲ್ಲ ಫ್ಲೈ ಓವರ್ ಗಳಿಗೆ ಹಾಕಲಾಗಿದೆ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಲಗೇಜು ಸಮೇತ ಬಸ್ ನಿಲ್ದಾಣಗಳಿಗೆ ಆಗಮಿಸುತ್ತಿರುವ ಜನರು ತವರಿನತ್ತ ಮುಖ ಮಾಡುತ್ತಿದ್ದಾರೆ. ಸಿಕ್ಕ ಬಸ್ ಗಳನ್ನು ಹತ್ತಿಕೊಂಡು ಮೊದಲು ಊರು ಸೇರಿಕೊಳ್ಳಬೇಕೆಂಬ ಅವಸರದಲ್ಲಿದ್ದಾರೆ.
Advertisement
ಸರ್ಕಾರ ಬಿಎಂಟಿಸಿ ಬಸ್ ಗಳಲ್ಲಿ ಶೇ.50 ರಷ್ಟು ಮಾತ್ರ ಪ್ರಯಾಣಿಕರನ್ನ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದೆ. ಆದ್ರೆ ಈ ರೂಲ್ಸ್ ಬಿಎಂಟಿಸಿ ಬಸ್ ಗಳಲ್ಲಿ ಮಾಯವಾಗಿತ್ತು. ಜನ ಕೊರೊನಾ ಇದೆ ಅನ್ನೋದನ್ನ ಮರೆತು ಬಸ್ ಗಳಲ್ಲಿ ಸೀಟ್ ಹಿಡಿಯುವ ದೃಶ್ಯಗಳು ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಂಡು ಬರುತ್ತಿವೆ. ಇತ್ತ ಕೆ.ಆರ್.ಮಾರ್ಕೆಟ್ ನಲ್ಲಿ ಸಹಜ ಸ್ಥಿತಿಗೆ ಮರಳಿದ್ದು, ಜನರಿಂದ ತುಂಬಿ ತುಳುಕುತ್ತಿವೆ.
Advertisement
Advertisement
ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದೆ. ಇತ್ತ ತಜ್ಞರು ಬೆಂಗಳೂರಿನಲ್ಲಿ ಶೇ.1ರಷ್ಟು ಜನರಿಗೆ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪ್ರಮಾಣ ಹೆಚ್ಚಾದಲ್ಲಿ ಬೆಂಗಳೂರಿನ ಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement