– ಪಬ್ಲಿಕ್ ಟಿವಿಗೆ ಎಲ್ಲ ಗೊತ್ತಾಗಿದ್ಯಲ್ಲ
– ಅಣ್ಣನ ಮನೆಯಲ್ಲಿ ನನಗೆ ಗೊತ್ತಿದ್ದಂತೆ ನಗದು ಸಿಕ್ಕಿಲ್ಲ
ಬೆಂಗಳೂರು: ಪಬ್ಲಿಕ್ ಟಿವಿ ಸಿಬಿಐ ಮೂಲಗಳನ್ನು ಆಧರಿಸಿ 50 ಲಕ್ಷ ನಗದನ್ನು ವಶಪಡಿಸಿಕೊಂಡಿರುವ ಬಗ್ಗೆ ಇಂದು ಮಧ್ಯಾಹ್ನವೇ ಎಕ್ಸ್ಕ್ಲೂಸಿವ್ ವರದಿ ಬಿತ್ತರಿಸಿತ್ತು. ಆದರೆ ಸಿಬಿಐ ಅಧಿಕೃತ ಪ್ರಕಟಣೆ ಹೊರಡಿಸುವ ಮುನ್ನ ಮಾತನಾಡಿದ್ದ ಸಂಸದ ಡಿಕೆ ಸುರೇಶ್, ಪಬ್ಲಿಕ್ ಟಿವಿಗೆ ಎಲ್ಲಾ ಗೊತ್ತಾಗಿದ್ಯಂತಲ್ಲ ಎಂದಿದ್ದರು.
Advertisement
Advertisement
50 ಲಕ್ಷ ಸಿಕ್ಕಿದ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ನನ್ನ ಅಣ್ಣನ ಮನೆಯಲ್ಲಿ ನನಗೆ ಗೊತ್ತಿದ್ದಂತೆ ನಗದು ಸಿಕ್ಕಿಲ್ಲ. ಪಬ್ಲಿಕ್ ಟಿವಿ 50 ಲಕ್ಷ ಸಿಕ್ಕಿದೆ ಅಂತಾ ವರದಿ ಮಾಡಿದೆ. ಆ ಹಣ ಯಾರ ಮನೆಯಲ್ಲಿ ಸಿಕ್ಕಿದೆ ಅಂತಾ ಪಬ್ಲಿಕ್ ಟಿವಿ ಹೇಳಬೇಕು ಅಂತಾ ಡಿಕೆ ಸುರೇಶ್, ಪಬ್ಲಿಕ್ ಟಿವಿ ದೊಡ್ಡ ತಪ್ಪು ಮಾಡಿದ್ದೇವೆ ಎಂಬಂತೆ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಈ ಡಿಕೆ ಶಿವಕುಮಾರ್ ಹೆದರುವ ಮಗ ಅಲ್ಲ, ಯಾವುದಕ್ಕೂ ಜಗ್ಗಲ್ಲ: ಡಿಕೆಶಿ
Advertisement
ಸಂಜೆ ಸಿಬಿಐ ಅಧಿಕೃತ ಪ್ರಕಟಣೆ ಹೊರಡಿಸಿ, ಡಿಕೆಶಿಗೆ ಸಂಬಂಧಿಸಿದಂತೆ 14 ಕಡೆ ನಡೆದ ದಾಳಿಯಲ್ಲಿ 57 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿತು. ಈ ಮೂಲಕ ಪಬ್ಲಿಕ್ ಟಿವಿ ವರದಿ ಮಾಡಿದ್ದ ಸುದ್ದಿ ನಿಜವಾಯಿತು.
Advertisement
ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್ 57 ಲಕ್ಷ ರೂ. ನಗದು ಸಿಕ್ಕಿದ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಲಿಲ್ಲ. ಅಷ್ಟು ದುಡ್ಡು ಸಿಕ್ಕಿದರೆ ಸಂತೋಷ. ನಾನೇನು ಕದ್ದು ಮುಚ್ಚಿ ಏನು ಮಾಡಿಲ್ಲ. ನನ್ನ ಮನೆಯಲ್ಲಿ 1.77 ಲಕ್ಷ ಸಿಕ್ಕಿದೆ. ನನ್ನ ಕಚೇರಿಯಲ್ಲಿ ಸಿಬ್ಬಂದಿ ಖರ್ಚಿಗೆ ಅಂತಾ ಮೂರ್ನಾಲ್ಕು ಲಕ್ಷ ಸಿಕ್ಕಿರಬಹುದು. ದೆಹಲಿಯ ಸುರೇಶ್ ಮನೆಯಲ್ಲಿ ಎರಡ್ಮೂರು ಲಕ್ಷ ಸಿಕ್ಕಿರಬಹುದು. ಊರಿನಲ್ಲಿ ಎಷ್ಟು ಸಿಕ್ಕಿದೆ ಎನ್ನುವುದು ಗೊತ್ತಿಲ್ಲ ಎಂದರು. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದ್ಯೋ ನಂಗೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡರು
ಇದಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಡಿಕೆಶಿ, ಇಂದಿನ ದಾಳಿಯಲ್ಲಿ ನನ್ನ ಮನೆಯಲ್ಲಿ ಪಂಚೆ, ಪ್ಯಾಂಟು ಶರ್ಟು, ಸೀರೆಗಳ ಲೆಕ್ಕವನ್ನು ಸಿಬಿಐ ತಗೊಂಡಿದೆ ಎಂದು ಹೇಳಿದರು.