ಗಾಂಧಿನಗರ: ಮದುವೆಯಾಗುವುದಾಗಿ ನಂಬಿಸಿ 56 ವರ್ಷದ ವ್ಯಕ್ತಿಯೊಬ್ಬ ವಿಧವೆಗೆ 12 ಲಕ್ಷ ವಂಚಿಸಿದ ಘಟನೆ ಗುಜರಾತ್ (Gujrat) ನ ಮೊರ್ಬಿ (Morbi) ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಮಹೇಶ್ ಗೋಸಾಯಿ ಎಂದು ಗುರುತಿಸಲಾಗಿದೆ. ಈತ ಮೊರ್ಬಿಯ ಅಮ್ರಾನ್ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾನೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇನ್‍ಸ್ಟಾಗ್ರಾಂ ಮೂಲಕ ಮಹಿಳೆಗೆ ಗೋಸಾಯಿಯ ಪರಿಚಯವಾಗಿದೆ. ಈ ವೇಳೆ ಆರೋಪಿ ತಾನು ಲಂಡನ್‍ಗೆ ಶಿಫ್ಟ್ ಆಗುವುದಾಗಿ ಹೇಳಿದ್ದಾನೆ. ಅಲ್ಲದೆ ಇದೇ ವೇಳೆ ಮದುವೆಯಾಗುತ್ತೇನೆ. ಮುಂದೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾನೆ.
Advertisement
Advertisement
ವೀಸಾ ಶುಲ್ಕ ಮತ್ತು ಇತರ ಔಪಚಾರಿಕತೆಗಳ ನೆಪದಲ್ಲಿ ಹಣ ಕೊಡುವಂತೆ ಆರೋಪಿ ಕೇಳಿದ್ದಾನೆ. ಮಹಿಳೆ ಕೂಡ ಆರೋಪಿ ಮಾತು ನಂಬಿ ಮೊದಲು 5 ಲಕ್ಷ ರೂ. ಹಣ ಕಳುಹಿಸಿದ್ದಾಳೆ. ಗೋಸಾಯಿ ಅವರು ಮೊದಲು ಕೆನಡಾಕ್ಕೆ ಹೋಗಿ ನಂತರ ಲಂಡನ್‍ಗೆ ಹೋಗುವುದಾಗಿ ಸಂತ್ರಸ್ತೆಗೆ ತಿಳಿಸಿದ್ದಾರೆ ಎಂದು ವರಿಯಾಗಿದೆ. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ
Advertisement
Advertisement
ಇಷ್ಟು ಮಾತ್ರವಲ್ಲದೇ ವಿದೇಶಕ್ಕೆ ಹೋಗುವಾಗ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲ್ಲ. ಹೀಗಾಗಿ ನಿನ್ನ ಆಭರಣಗಳನ್ನು ನನಗೆ ಕಳುಹಿಸು, ಅವುಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಆದರೆ ಸದ್ಯ ಮಹಿಳೆ ತಾನು ಮೋಸ ಹೋಗಿರುವುದು ಅರಿವಾದ ನಂತರ ಆಕೆ ಪೊಲೀಸರ್ನು ಸಂಪರ್ಕಿಸಿದ್ದಾಳೆ.
ಮಹಿಳೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.