ವಾಷಿಂಗ್ಟನ್: ದಿನ ಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ಬಾಡಿಗೆ ತಾಯ್ತನದ ಹಲವಾರು ಸುದ್ದಿಗಳನ್ನು ಕೇಳುತ್ತಿರುತ್ತೀರಾ. ಆದರೆ ಇಲ್ಲೊಬ್ಬ ಮಹಿಳೆ ಬಾಡಿಗೆ ತಾಯ್ತನದ (Surrogate) ಮೂಲಕ ತನ್ನ ಮಗ ಮತ್ತು ಸೊಸೆಯ ಮಗುವಿಗೆ ಜನ್ಮ ನೀಡಿದ್ದಾಳೆ.
ಗರ್ಭಕೋಶ ತೆಗೆದುಹಾಕಿದ್ದರಿಂದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂದು ಪತಿ ಆತಂಕಗೊಂಡಿದ್ದರು. ಕೊನೆಗೆ ಯಾವುದೇ ಆಯ್ಕೆಗಳಿಲ್ಲದೇ ಇರುವಾಗ ಈ ಹೆಜ್ಜೆಯನ್ನು ಇಡಬೇಕಾಯಿತು. ಹೌದು, 56 ವರ್ಷದ ತಾಯಿ ನ್ಯಾನ್ಸಿ ಹಾಕ್ ಅವರಿಗೆ ಮಗ ಜೆಫ್ ಹಾಕ್ ಮತ್ತು ಆತನ ಪತ್ನಿ ಕ್ಯಾಂಬ್ರಿಯಾ ಬಾಡಿಗೆ ತಾಯಿಯಾಗುತ್ತೀರಾ ಎಂದು ಕೇಳಿದಾಗ, ಮೊದಲಿಗೆ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಆದರೆ ಇದು ಕುಟುಂಬಕ್ಕಾಗಿ ಮಾಡುತ್ತಿರುವ ಕರ್ತವ್ಯ ಎಂದು ಭಾವಿಸಿ ಇದೀಗ ನ್ಯಾನ್ಸಿ ಹಾಕ್ ಮಗ ಮತ್ತು ಸೊಸೆಯ ಐದನೇ ಮಗುವಿಗೆ ಜನ್ಮ ನೀಡಿದ್ದಾರೆ.
Advertisement
View this post on Instagram
Advertisement
ವೆಬ್ ಡೆವಲಪರ್ ಆಗಿರುವ ಜೆಫ್ ಹಾಕ್, ಇಡೀ ಅನುಭವವನ್ನು “ಒಂದು ಸುಂದರ ಕ್ಷಣ” ಎಂದು ಬಣ್ಣಿಸಿದ್ದು, ತಮ್ಮ ತಾಯಿ ಮಗುವಿಗೆ ಜನ್ಮ ನೀಡುವುದನ್ನು ಎಷ್ಟು ಜನ ನೋಡಲು ಸಾಧ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ
Advertisement
View this post on Instagram
Advertisement
ಈ ಕುರಿತಂತೆ ಮಾತನಾಡಿದ ನ್ಯಾನ್ಸಿ ಹಾಕ್, ಒಂಬತ್ತು ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲಿದ್ದು, ಇದು ಕುಟುಂಬದವರಿಗಾಗಿ ಎಂದಿದ್ದಾರೆ. ಜೊತೆಗೆ ಎಂದಿಗೂ ಮರೆಯಲಾಗದ ಮತ್ತು ಸ್ಮರಣೀಯ ಅನುಭವ. ಮಗುವಿಗೆ ಜನ್ಮ ನೀಡುವಾಗ ಹೊಸ ಅನುಭವವಾಯಿತು. ಆದರೆ ಮಗುವನ್ನು ನನ್ನ ಜೊತೆ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ – 13 ಸಾವು, 250 ಮಂದಿ ಸ್ಥಳಾಂತರ
ತನ್ನ ತಾಯಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಇಚ್ಛೆಯಂತೆಯೇ, ಮಗುವಿಗೆ ಹನ್ನಾ ಎಂದು ಜೆಫ್ ಹಾಕ್ ನಾಮಕರಣ ಮಾಡಿದ್ದಾರೆ. ಉತಾಹ್ ಟೆಕ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿರುವ ನ್ಯಾನ್ಸಿ ಹಾಕ್, ಟೆಸ್ಟ್‍ಗೆ ಕೂಡ ಒಳಗಾಗದೇ ತಮಗಾಗುವುದು ಹೆಣ್ಣು ಮಗುವೇ ಎಂದು ಹೇಳಿದ್ದರು ಎನ್ನಲಾಗುತ್ತಿದೆ.