ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 56 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಮೂಲಕ ನಿನ್ನೆಗಿಂತ ಇಂದು ಒಟ್ಟು 10 ಕೇಸ್ ಏರಿಕೆ ಕಂಡಿದೆ. ಇಂದು ಶೂನ್ಯ ಮರಣ ಪ್ರಕರಣ ವರದಿಯಾಗಿದೆ.
Advertisement
ಬೆಂಗಳೂರು ನಗರದಲ್ಲಿ 49 ಪಾಸಿಟಿವ್ ಕೇಸ್ ಮತ್ತು ಶೂನ್ಯ ಮರಣ ಪ್ರಕರಣ ದಾಖಲಾಗಿದೆ. ಇಂದು 0.00% ಮರಣ ಪ್ರಮಾಣವಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 40,057 ಮರಣ ಪ್ರಕರಣ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 0.56% ಮತ್ತು ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,441ಕ್ಕೆ ತಲುಪಿದೆ. ಒಟ್ಟು 45 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ: ಸಿದ್ದರಾಮಯ್ಯ
Advertisement
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 39,46,002 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,04,462 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 5,913 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 9,981 ಸ್ಯಾಂಪಲ್ (ಆರ್ಟಿಪಿಸಿಆರ್ 8,147 + 1,834 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ʻಕೆಜಿಎಫ್ 2ʼ ರಿಲೀಸ್ ಬೆನ್ನಲ್ಲೇ ಯಶ್ ಟೆಂಪಲ್ ರನ್: ಧರ್ಮಸ್ಥಳದಲ್ಲಿ ರಾಕಿಭಾಯ್
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 49, ದಕ್ಷಿಣಕನ್ನಡ ಮತ್ತು ದಾವಣಗೆರೆ 2, ಬಳ್ಳಾರಿ, ಬೆಳಗಾವಿ ಮತ್ತು ಉಡುಪಿಯಲ್ಲಿ ತಲಾ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.