– ಇಂದು ಶೀವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲಿಸ್ತೀನಿ
ಬೆಂಗಳೂರು: ಮೋದಿ 56 ಇಂಚಿನ ಎದೆ ಇದೆ ಎಂದು ಹೇಳುತ್ತಾರೆ. ಎದೆ ಇದ್ದರೆ ಸಾಲದು, ಅದರ ಒಳಗೆ ಹೃದಯ ಇರಬೇಕು ಎಂದು ಪ್ರಧಾನಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ, ಅಂಬಾನಿಗೆ ಮಾತು ಕೊಟ್ಟಿದ್ದಾರೆ. ಅದಕ್ಕೆ ಇಷ್ಟೆಲ್ಲ ಮಾಡ್ತಿದ್ದಾರೆ. ಅವರ ಗುಲಾಮರಾಗಿದ್ದಾರೆ. ಇಂಟಲಿಜೆನ್ಸ್ ಏನು ಮಾಡ್ತಿತ್ತು. ಇದು ಇಂಟಲಿಜೆನ್ಸ್ ಫೈಲೂರ್ ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ.
Advertisement
Advertisement
ಪ್ರಧಾನಿ ಮೋದಿ ಒಂದು ಬಾರಿಯಾದ್ರು ರೈತರ ಜೊತೆಗೆ ಮಾತಾಡಿದ್ದಾರಾ…?, ಪ್ರಧಾನಿಯಾಗಿ ಪ್ರತಿಷ್ಠೆಗೆ ತಗೊಂಡಿದ್ದಾರೆ. ಅದಾನಿ, ಅಂಬಾನಿ ಡಿಕ್ಟೆಟ್ ಮಾಡಿ ಈ ಕಾಯಿದೆ ಮಾಡಿಸಿದ ಹಾಗಿದೆ ಎಂದರು.
Advertisement
ಬಿ.ಸಿ ಪಾಟೀಲ್ ನಿರ್ಲಕ್ಷ್ಯತನದಿಂದ ಮಾತಾಡಿದ್ದಾರೆ. ಬೇಜವಾಬ್ದಾರಿಯಿಂದ ಮಾತಾಡಬಾರದು. ಖಲಿಸ್ತಾನ್ ನಿಂದ ಯಾರು ಬಂದಿದ್ರು ಅಂತ ಹೇಳಲಿ. ಕಣ್ಣೊರಸುವುದಕ್ಕೆ ಕೇಂದ್ರ ಸರ್ಕಾರ 11 ಮೀಟಿಂಗ್ ಮಾಡಿದ್ರು. ರೈತರು ವಿರೋಧ ಮಾಡ್ತಿದ್ದಾರೆ, ಕಾಯಿದೆಗಳು ಎಂದು ವಾಪಸ್ ತೆಗೆದುಕೊಳ್ಳಿ. ಬಿಸಿಲು, ಚಳಿ ಮಳೆ ಎನ್ನದೆ ಮಹಿಳೆಯರು, ಮಕ್ಕಳು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
ಇಂದು ಶಿವಮೊಗದಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಹೋಗ್ತೀನಿ. ಅಲ್ಲಿ ಆರು ಜನ ಸತ್ತಿದ್ದರು. ಹೀಗಾಗಿ ಸ್ಥಳಕ್ಕೇ ಹೋಗಿ ಪರಿಶೀಲಿಸ್ತಿನಿ. ಅಧಿವೇಶನದಲ್ಲಿ ಸ್ಫೋಟದ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.