5,532 ಮಂದಿಗೆ ಸೋಂಕು – 4,077 ಡಿಸ್ಚಾರ್ಜ್‌

Public TV
1 Min Read
CORONA VIRUS 1 3

ಬೆಂಗಳೂರು: ಇಂದು ರಾಜ್ಯದಲ್ಲಿ 5,532 ಮಂದಿಗೆ ಸೋಂಕು ಬಂದಿದ್ದು 4,077 ಮಂದಿ ಬಿಡುಗಡೆಯಾಗಿದ್ದಾರೆ. 84 ಸೋಂಕಿತರು ಮೃತಪಟ್ಟಿದ್ದಾರೆ.

ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ. ಈ ಪೈಕಿ 74,590 ಸಕ್ರಿಯ ಪ್ರಕರಣಗಳಿದ್ದರೆ 57,725 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

AUG 02 2

ಇಲ್ಲಿಯವರೆಗೆ ಒಟ್ಟು 2,496 ಮಂದಿ ಮೃತಪಟ್ಟಿದ್ದು ಐಸಿಯುನಲ್ಲಿ 638 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 18,517 ಮಂದಿಗೆ ರ್ಯಾಪಿಡ್‌, 14,500 ಮಂದಿಗೆ ಆರ್‌ಟಿ ಪಿಸಿಆರ್‌ ಸೇರಿದಂತೆ ಒಟ್ಟು 33,017 ಮಂದಿಗೆ ಕೋವಿಡ್‌ 19 ಪರೀಕ್ಷೆ ಮಾಡಲಾಗಿದೆ.

AUG 02 3

ಬೆಂಗಳೂರು ನಗರದಲ್ಲಿ 2,105, ಬಳ್ಳಾರಿ 377, ಕಲಬುರಗಿ 238 ಮತ್ತು ಮೈಸೂರಿನಲ್ಲಿ ತಲಾ 238 ಮಂದಿಗೆ ಸೋಂಕು ಬಂದಿದೆ.ಬೆಂಗಳೂರಿನಲ್ಲಿ 2,331, ತುಮಕೂರು 150, ಬಳ್ಳಾರಿ 105, ಕಲಬರುಗಿ 117, ರಾಯಚೂರು 153 ಮಂದಿ ಬಿಡುಗಡೆಯಾಗಿದ್ದಾರೆ.

AUG 02 1

ಒಟ್ಟು 638 ಮಂದಿ ಐಸಿಯುನಲ್ಲಿದ್ದು, ಬೆಂಗಳೂರು ನಗರ 339, ಧಾರವಾಡ 40, ಹಾಸನ 37, ಬಳ್ಳಾರಿ 22 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *