ಬೆಂಗಳೂರು: ನಗರ-ಪಟ್ಟಣ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅನಧಿಕೃತ ನಿವೇಶನಗಳಿಗೆ, ಮನೆಗಳಿಗೆ ಒಂದು ಬಾರಿ `ಬಿ’ ಖಾತೆ ಮಾಡಿಕೊಡುವ ನಿರ್ಧಾರ ಐತಿಹಾಸಿಕ ನಿರ್ಧಾರ ಎಂದು ಸಚಿವ ರಹೀಂಖಾನ್ (Rahim Khan), ಸಚಿವ ಬೈರತಿ ಸುರೇಶ್ (Byrathi Suresh) ಬಣ್ಣಿಸಿದರು.ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ತನಿಖೆ ಮಾಡಿ: ನಾಗರಾಜ್ ಯಾದವ್
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ರಾಜ್ಯದಲ್ಲಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ 55 ಲಕ್ಷ ಮನೆಗಳಿಗೆ ಬಿ ಖಾತೆಗಳೇ ಇರಲಿಲ್ಲ. ಹೀಗಾಗಿ ನಮ್ಮ ಸರ್ಕಾರ `ಬಿ’ ಖಾತೆ ಕೊಡುವ ಕೆಲಸ ಮಾಡ್ತಿದೆ. ಈ ನಿಯಮದಿಂದ ಮಾಲೀಕನಿಗೆ ದಾಖಲಾತಿ ಸಿಗಲಿದೆ. ಸರ್ಕಾರಕ್ಕೆ ಟ್ಯಾಕ್ಸ್ ಬರುತ್ತದೆ. ನಮ್ಮ ನಿರ್ಧಾರದಿಂದ ಸಾರ್ವಜನಿಕರು ಖುಷಿಯಾಗಿದ್ದಾರೆ. ಇದು ನಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದರು.
ಬಳಿಕ ಮಾತನಾಡಿದ ಸಚಿವ ರಹೀಂಖಾನ್, ನಗರ-ಪಟ್ಟಣ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅನಧಿಕೃತ ನಿವೇಶನಗಳಿಗೆ, ಮನೆಗಳಿಗೆ ಒಂದು ಬಾರಿ `ಬಿ’ ಖಾತೆ ಮಾಡಿಕೊಡುವ ಪ್ರಕ್ರಿಯೆ ಶುರುವಾಗಿದೆ. ಇದು ನಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರ. 40 ವರ್ಷಗಳಿಂದ ದಾಖಲಾತಿ ಇಲ್ಲದೆ ಜನರು ಕಣ್ಣೀರು ಹಾಕ್ತಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ನಿರ್ಣಯದಂತೆ ಬಿ-ಖಾತಾ ಮಾಡುವ ನಿರ್ಣಯ ಮಾಡಲಾಗಿದೆ. ಈಗಾಗಲೇ ಬಿ ಖಾತಾ ಪ್ರಕ್ರಿಯೆ ಶುರುವಾಗಿದೆ. ಸರ್ಕಾರದ ನಿಯಮದಿಂದ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿರೋರಿಗೆ, ಮನೆ ಮಾಲೀಕನಿಗೆ ದಾಖಲಾತಿ ಸಿಗಲಿದೆ. ಇದು ನಮ್ಮ ಸರ್ಕಾರದ ಐತಿಹಾಸಿಕ ತೀರ್ಮಾನವಾಗಿದೆ ಎಂದರು.ಇದನ್ನೂ ಓದಿ: ವೇದವ್ಯಾಸ್ ಕಾಮತ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಖಂಡನೆ – ಸರ್ಕಾರಕ್ಕೆ ತೀವ್ರ ತರಾಟೆ