– ವಿಶ್ವ ಆತ್ಮಹತ್ಯೆ ತಡೆ ದಿನದಂದು ಆತಂಕಕಾರಿ ವರದಿ
– ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ಕಾರಣಗಳೇನು?
ಚಿಕ್ಕಬಳ್ಳಾಪುರ: ಜೀವನ ಎಂಬುದು ಅತ್ಯಮೂಲ್ಯವಾದದ್ದು, ಆದ್ರೆ ಕೆಲವು ಬಾರಿ ಸಮಸ್ಯೆಗಳು ಬಂದಾಗ ಸರಿಯಾಗಿ ಎದುರಿಸಲಾಗದೆಯೋ, ಖಿನ್ನತೆಗೆ ಓಳಗಾಗಿಯೋ, ಇಲ್ಲ ದುಡುಕಿಯೋ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯೊಂದರಲ್ಲೇ ಮೂರು ವರ್ಷಗಳಲ್ಲಿ ಕಳೆಯೋದ್ರಳೋಗೆ 536 ಮಂದಿ ಆತ್ಮಹತ್ಯೆ ಮಾಡಿಕೊಂಡಿರುರುವುದು ವಿಶ್ವ ಆತ್ಮಹತ್ಯೆ ತಡೆ ದಿನದಂದು (World Suicide Prevention Day) ಹೊರಬಿದ್ದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮಹಿಳೆಯರಿಗಿಂತ ಪುರುಷರ ಸಂಖ್ಯೆಯ ಹೆಚ್ಚು?
ಇತ್ತೀಚಿನ ದಿನಮಾನಗಳಲ್ಲಿ ಆತ್ಮಹತ್ಯೆ ಎಂಬುದು ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ. ಮಕ್ಕಳು, ಯುವಕ-ಯುವತಿಯರು, ಅದ್ರಲ್ಲೂ ಗೃಹಿಣಿಯರು ಸಣ್ಣ ಪುಟ್ಟ ಕಾರಣಗಳಿಗೂ ಬದುಕಿನ ಪಯಣವನ್ನೇ ಮುಗಿಸುವ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಜೀವನ ಅಂದ ಮೇಲೆ ನೋವು ನಲಿವು ಕಷ್ಟ ಸುಖ ದುಃಖ ದುಮ್ಮಾನಗಳೆಲ್ಲವೂ ಸಾಮಾನ್ಯ ಎಂಬಂತೆ ಸ್ವೀಕರಿಸಲಾಗದೆ ಕೆಲವರು ತಮ್ಮನ್ನೇ ತಾವೇ ಸಾವಿನ ಮನೆಗೆ ಕರೆದೊಯ್ದುಕೊಳ್ಳುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಕಳೆದ ಮೂರೇ ವರ್ಷಗಳಲ್ಲೇ 536 ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಮನೆ ಸೇರಿದ್ದಾರೆ. ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೊ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, ಇತ್ತಿಚಿಗೆ ಆತ್ಮಹತ್ಯೆ ಮಾಡಿಕೊಳ್ಳೊವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 3 ವರ್ಷಗಳಲ್ಲಿ ಪೊಲೀಸ್ ದಾಖಲೆಗಳ ಪ್ರಕಾರ ಅಧಿಕೃತವಾಗಿ 536 ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲಿ 404 ಜನ ಪುರುಷರು ವಿಷ ಸೇವಿಸಿ, ನೇಣು, ಬಿಗಿದುಕೊಂಡು, ಬೆಂಕಿ ಹಚ್ಚಿಕೊಂಡು, ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 132 ಜನ ಮಹಿಳೆಯರು ಸಹ ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆಗೆ ಕಾರಣಗಳೇನು?
ಬಹುತೇಕ ಮಂದಿ ವಿಷ ಸೇವನೆ, ನೇಣು, ಬೆಂಕಿ ಹಚ್ಚಿಕೊಳ್ಳುವುದು, ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಕಲಹ, ವಿದ್ಯಾಭ್ಯಾಸದ ಒತ್ತಡ, ಪ್ರೇಮ ವೈಫಲ್ಯ, ಉದ್ಯೋಗದ ಒತ್ತಡ, ಉದ್ಯೋಗ ಇಲ್ಲದಿರುವುದು, ಖಿನ್ನತೆ, ನಿರಾಶೆ ಆತ್ಮಹತ್ಯೆಗೆ ಕಾರಣವಾಗಿದೆ. ಇದನ್ನೂ ಓದಿ: ಗದಗ | ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶನ – ಅಪ್ರಾಪ್ತನ ವಿರುದ್ಧ ಕೇಸ್
ಎಸ್ಪಿ, ಆರೋಗ್ಯಾಧಿಕಾರಿಗಳು ಏನು?
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಪೊಲೀಸ್ ದಾಖಲೆಗಳ ಪ್ರಕಾರ, ಕಳೆದ 3 ವರ್ಷಗಳಲ್ಲಿ 536 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಅಂತ ಚಿಕ್ಕಬಳ್ಳಾಪುರ ಎಸ್‍ಪಿ ಕುಶಲ್ ಚೌಕ್ಸಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ “ವಿದ್ಯಾರ್ಥಿಗಳು, ಯುವಕರು, ವಿವಾಹಿತರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕುಟುಂಬ ಕಲಹ, ವಿದ್ಯಾಭ್ಯಾಸ ಒತ್ತಡ, ಪ್ರೇಮ ವೈಫಲ್ಯ ಪ್ರಮುಖ ಕಾರಣಗಳಾಗಿದ್ದು ಆತ್ಮಹತ್ಯೆಗಳನ್ನ ತಡೆಗಟ್ಟಲು ಜಾಗೃತಿ ಮೂಡಿಸುವ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್ | ಕ್ರಿಕೆಟಿಗ ಪೃಥ್ವಿ ಶಾಗೆ 100 ರೂ. ದಂಡ ವಿಧಿಸಿದ ಮುಂಬೈ ಕೋರ್ಟ್
ರಾಜ್ಯದಲ್ಲಿ 2ನೇ ಸ್ಥಾನ:
ಇನ್ನೂ ದೇಶದಲ್ಲೇ ಕರ್ನಾಟಕ ಆತ್ಮಹತ್ಯೆಗಳ ಸಂಖ್ಯೆಯ ಪ್ರಮಾಣದಲ್ಲಿ 2ನೇ ಸ್ಥಾನದಲ್ಲಿದ್ದು, 15 ರಿಂದ 30 ವರ್ಷದೊಳಗಿನ ಯುವಜನರೇ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಸಾಂಕ್ರಾಮಿಕಕ್ಕಿಂತಲೂ ಬೇಗ ಹರಡುತ್ತಿರುವ ಗಂಭೀರ ಸ್ವರೂಪದ ಸಾಮಾಜಿಕ ಸಮಸ್ಯೆಯಾಗುತ್ತಿದೆ. ಏನೇ ಆದ್ರೂ ಆತ್ಮಹತ್ಯೆಗೆ ಪರಿಹಾರಗಳು ಇಲ್ಲದಿರಬಹುದು. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರಗಳು ಇದ್ದೇ ಇರಲಿವೆ. ಕೊಂಚ ತಾಳ್ಮೆಯಿಂದ ಯೋಚನೆ ಮಾಡಿ ನಿಮಿಷ ದುಡಕದೆ ಮುಂದೂಡಿ ಸಮಯ ಕಳೆದರೆ ಸಾಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆತ್ಮಹತ್ಯೆ ತಡಗೆಟ್ಟುವ ಸಲುವಾಗಿ ಮತ್ತಷ್ಟು ಮುಂಜಾಗ್ರತಾ ಕಾರ್ಯಕ್ರಮಗಳನ್ನ ರೂಪಿಸಬೇಕಿದೆ. ಇದನ್ನೂ ಓದಿ: ಜೈಲು ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ – ಬಾಂಬೆ ಸಲೀಂ ಚಿಕ್ಕಬಳ್ಳಾಪುರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್