ನೆಲಮಂಗಲ: ಹೊರ ರಾಜ್ಯದಿಂದ ಬೆಳೆದ ಗಾಂಜಾ ಸೊಪ್ಪುನ್ನು ತಂದು ಮಾರಾಟ ಮಾಡುತ್ತಿದ್ದ ಗುಂಪೊಂದನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಲುವನಹಳ್ಳಿ ಮೂಲದ ಉಮೇಶ್ ಮತ್ತು ಪಶ್ಚಿಮ ಗೋದಾವರಿಯ ರಾಮ್ ಪ್ರಸಾದ್ ಬಂಧಿತ ಗಾಂಜಾ ಪೇಡ್ಲರ್‌ಗಳು. ಮತ್ತೊಬ್ಬ ಆರೋಪಿ ಸಲೀಂ ಪಾಷ ತಲೆಯ ಮರೆಸಿಕೊಂಡಿದ್ದು, ಹುಡುಕಾಟ ನಡೆಸಿದ್ದಾರೆ. ದಾಳಿಯಲ್ಲಿ ಪೊಲೀಸರು 15.90 ಲಕ್ಷ ಮೌಲ್ಯದ 53 ಕೆ.ಜಿ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.
Advertisement
Advertisement
ತಾಲೂಕಿನ ಅರಿವೇಸಂದ್ರ ಗೇಟ್ ಬಳಿಯ ಸುಬ್ಬಯ್ಯ ಲಾರಿ ಪಾರ್ಕಿಂಗ್ ಬಳಿಯಲ್ಲಿ ಮಾರಾಟ ಮಾಡುವ ವೇಳೆಯಲ್ಲಿ ಪೊಲೀಸರು ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆರೋಪಿಗಳು ಬಳಸುತ್ತಿದ್ದ ಮಾರುತಿ 800 ಕಾರು ಹಾಗೂ ಎರಡು ಮೊಬೈಲ್ ಪೋನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ
Advertisement
Advertisement
ಆಂಧ್ರದಿಂದ ಬೆಂಗಳೂರು, ತುಮಕೂರು, ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಿಗೆ ಗಾಂಜಾವನ್ನು ಉಮೇಶ್ ಸರಬರಾಜು ಮಾಡುತ್ತಿದ್ದ ಎನ್ನಲಾಗಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ರಾಜೀವ್, ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಎಸ್‌ಐ ಚಿಕ್ಕನರಸಿಂಹಯ್ಯ ತಂಡದವರು ನಡೆಸಿದ ಒಂದು ವಾರದ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನ ಕೊಂದು ಬ್ಯಾಗ್‍ನಲ್ಲಿ ತುಂಬಿದ್ರು