-ದೇಶದಲ್ಲಿ 18 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು
ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ದೇಶದಲ್ಲಿ ಈವರಗೆ 18,032 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದ್ದು, ವರದಿಗಾರಿಕೆಗೆ ತೆರೆಳಿದ್ದ 53 ಮಂದಿ ಪತ್ರಕರ್ತರಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ.
ಭಾರತದಲ್ಲಿ ಅತೀ ವೇಗವಾಗಿ ಕೊರೊನಾ ಹರಡುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 223 ಮಂದಿ ಸಾವನ್ನಪ್ಪಿದ್ದು, ಕೊರೊನಾ ಸೋಂಕಿತರ ಸಂಖ್ಯೆ 4,483ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಮುಂಬೈವೊಂದರಲ್ಲೇ ವಿವಿಧ ಮಾಧ್ಯಮ ಸಂಸ್ಥೆಗಳ 53 ಪತ್ರಕರ್ತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲೂ ಮುಂಬೈನ ಧಾರಾವಿ ಸ್ಲಾಮ್‍ಗೆ ತೆರೆಳಿ ವರದಿಗಾರಿಕೆ ಮಾಡಿದ್ದ ಪತ್ರಕರ್ತರಿಗೆ ಹೆಚ್ಚು ಸೋಂಕು ತಗುಲಿದೆ.
283 more #COVID19 cases reported in Maharashtra, taking total positive cases in the state to 4483, as of 11 am today. Of the 283 new cases, Mumbai has recorded 187: Rajesh Tope, Maharashtra Health Minister (file pic) pic.twitter.com/YYDkWdme4P
— ANI (@ANI) April 20, 2020
ಹಗಲು ರಾತ್ರಿ ಶ್ರಮಪಟ್ಟು ಜನರಿಗೆ ಕೊರೊನಾ ಬಗ್ಗೆ ಮಾಹಿತಿ ಮುಟ್ಟಿಸುವ ಪತ್ರಕರ್ತರಿಗೆಂದೇ ಮಹಾರಾಷ್ಟ್ರ ಸರ್ಕಾರ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿತ್ತು. ಈವೆಲೆ 167ಕ್ಕೂ ಅಧಿಕ ಮಂದಿ ಪತ್ರಕರ್ತರನ್ನು ತಪಾಸಣೆಗೆ ಒಳಪಡಿಸಿ, ಅವರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 53 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ಮುಂಬೈ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಮಾಹಿತಿ ನೀಡಿದೆ.
53 journalists in Mumbai tested positive for #COVID19; All are under isolation.Samples of 171 journalists reporting from field,including Photographers,Video Journalists&Reporters,were collected.Most of the positive journalists were asymptomatic: Brihanmumbai Municipal Corporation pic.twitter.com/Q4eDRYuYBw
— ANI (@ANI) April 20, 2020
ಅಲ್ಲದೇ ಮತ್ತಷ್ಟು ಪತ್ರಕರ್ತರಿಗೂ ಸೋಂಕು ತಗುಲುವ ಸಾಧ್ಯತೆಗಳಿದೆ ಎಂದು ಪಾಲಿಕೆ ಎಚ್ಚರಿಸಿದೆ. ಸೋಂಕಿತರಲ್ಲಿ ಹೆಚ್ಚಿನವರು ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು, ಕ್ಯಾಮೆರಾಮನ್‍ಗಳು ಹಾಗೂ ಫೋಟೋಗ್ರಾಫರ್ ಗಳು ಸೇರಿದ್ದಾರೆ ಎಂದು ಪಾಲಿಕೆ ತಿಳಿಸಿದೆ.
ಈ ಬಗ್ಗೆ ಆರೋಗ್ಯ ಇಲಾಕೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಪ್ರತಿಕ್ರಿಯಿಸಿ, ಯಾವಾಗಲೂ ಕೆಲಸದಲ್ಲಿ ನಿರತರಾಗಿರುವ ಪತ್ರಕರ್ತರು ದಯವಿಟ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಫಿಲ್ಡ್ ಗೆ ಇಳಿಯಿರಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಿ. ನಿಮ್ಮ ಬಗ್ಗೆಯೂ ಕಾಲಜಿ ವಹಿಸಿ ಎಂದು ಹೇಳಿದ್ದಾರೆ.