ಸಾಕ್ರಮೆಂಟೊ: 53 ವರ್ಷಗಳ ಹಿಂದೆ ಅಂಟಾಕ್ರ್ಟಿಕ್‍ನಲ್ಲಿ ಪರ್ಸ್ ಕಳೆದುಕೊಂಡಿದ್ದ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋದ ವ್ಯಕ್ತಿಯೊಬ್ಬ ಇದೀಗ ಮತ್ತೆ ತನ್ನ ಪರ್ಸ್ ಹಿಂಪಡೆಯುವ ಮೂಲಕ ಆಶ್ಚರ್ಯಕ್ಕೊಳಗಾಗಿದ್ದಾನೆ.
Advertisement
1967ರಲ್ಲಿ ಯುಎಸ್ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ಕಾರ್ಯನಿರ್ವಸುತ್ತಿದ್ದ 91 ವರ್ಷದ ಪಾಲ್ ಗ್ರಿಶಮ್ ಎಂಬಾತ ತನ್ನ ಪರ್ಸ್ ಕಳೆದುಕೊಂಡಿರುವುದನ್ನು ನೆನಪಿಲ್ಲಿಯೇ ಇಟ್ಟುಕೊಂಡಿರಲಿಲ್ಲ. ಆದರೆ ದಕ್ಷಿಣ ಪಟ್ಟಣದ ಮೆಕ್‍ಮುರ್ಡೋ ನಿಲ್ದಾಣದಲ್ಲಿರುವ ಕಟ್ಟಡ ನೆಲಸಮಗೊಳಿಸುವ ಸಂದರ್ಭದಲ್ಲಿ ಲಾಕರ್ ಹಿಂದೆ ಪಾಲ್ ಗ್ರಿಶಮ್ ಪರ್ಸ್ ಪತ್ತೆಯಾಗಿದೆ.
Advertisement
ಪರ್ಸ್ ನಲ್ಲಿ ಗ್ರಿಶಮ್ ನೌಕಾಪಡೆಯ ಐಡಿ, ಡ್ರೈವಿಂಗ್ ಲೈಸೆನ್ಸ್, ತೆರಿಗೆ ಹೇಳಿಕೆ ಕುರಿತ ಚೀಟಿ, ಮನೆಯಲ್ಲಿ ತಯಾರಿಸುವ ಕಹ್ಲುವಾ ಪಾಕ ವಿಧಾನದ ಚೀಟಿ ಮತ್ತಷ್ಟು ವಸ್ತುಗಳು ಇದ್ದವು. ಆದರೆ ನಿಲ್ದಾಣದಲ್ಲಿ ಏನಾದರೂ ಕೊಳ್ಳಲು ಹಣ ಮಾತ್ರ ಪರ್ಸ್ ನಲ್ಲಿ ಇರಲಿಲ್ಲ.
Advertisement
Advertisement
ಈ ಹಿಂದೆ ಅಂಟಾಕ್ರ್ಟಿಕ್‍ನ ಸ್ನೋ ಕ್ಯಾಪ್ ಸಂಶೋಧನೆ ಮಾಡುವ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸಿದ ಸ್ಟೀಫನ್ ಡೆಕಾಟೊ ಎಂಬಾತ ಕಳೆದ ತಿಂಗಳಿನಿಂದ ತಮ್ಮ ಮಾಜಿ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದನು. ಈತ ಮೆಕ್‍ಮುರ್ಡೋ ಸ್ಟೇಷನ್ ಕಟ್ಟಡ ನೆಲಸಮ ಮಾಡುವ ಸಮಯದಲ್ಲಿ ಮಾಜಿ ಮಾಲೀಕ ಪಾಲ್ ಗ್ರಿಶಮ್ ಪರ್ಸ್ ಹಾಗೂ ಇನ್ನೊಂದು ಪರ್ಸ್‍ನನ್ನು ಪತ್ತೆ ಮಾಡಿದ್ದಾನೆ.
ಒಂದು ಗ್ರಿಶಮ್ ಪರ್ಸ್ ಆದರೆ, ಮತ್ತೊಂದು ಪರ್ಸ್ ಪಾಲ್ ಹೋವರ್ಡ್ ಎಂಬ ವ್ಯಕ್ತಿಗೆ ಸೇರಿದ್ದಾಗಿದೆ. ಆದರೆ ಈ ವ್ಯಕ್ತಿ 2016ರಲ್ಲಿ ಮೃತಪಟ್ಟಿರುವ ಕಾರಣ ಅವರ ಕುಟುಂಬಸ್ಥರು ಪರ್ಸ್ ಪಡೆದುಕೊಂಡಿದ್ದಾರೆ.