ಚೆನ್ನೈ: 7 ವರ್ಷದ ಬಾಲಕನ ಬಾಯಲ್ಲಿ ಸುಮಾರು 526 ಹಲ್ಲುಗಳು ಬೆಳೆದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಸವಿತಾ ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ 7 ವರ್ಷದ ಬಾಲಕನ ಬಾಯಿಯಲ್ಲಿದ್ದ 526 ಹಲ್ಲುಗಳನ್ನು ವೈದ್ಯರು ಆಪರೇಷನ್ ಮಾಡಿ ಹೊರ ತೆಗೆದಿದ್ದಾರೆ.
Advertisement
‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್’ ಎಂಬ ಅಪರೂಪದ ಖಾಯಿಲೆಯಿಂದ ಬಾಲಕ ಬಳಲುತ್ತಿದ್ದ. ಸುಮಾರು 526 ಹಲ್ಲುಗಳು ಬೆಳೆದಿದ್ದರಿಂದ ಕೆಳಗಿನ ಬಲ ದವಡೆ ತುಂಬಾ ಊದಿಕೊಂಡಿತ್ತು. ಸರ್ಜರಿ ಮೂಲಕ ಆ ಎಲ್ಲ ಹಲ್ಲುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
Advertisement
Advertisement
ಬಾಲಕ ಮೂರು ವರ್ಷದವನಿರುವಾಗಲೇ ಆತನ ಬಾಯಿ ಊದಿಕೊಂಡಿರುವುದನ್ನು ಪೋಷಕರು ಗಮನಿಸಿದ್ದರು. ಆದರೆ ಬಲಕನ ಬಾಯಿ ಬಾವು ಬಂದಿರುವ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಅಲ್ಲದೆ, ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಬಾಲಕ ಅಳಲು ಪ್ರಾರಂಭಿಸುತ್ತಿದ್ದ. ಹೀಗಾಗಿ ಪೋಷಕರು ನಿರ್ಲಕ್ಷ್ಯ ವಹಿಸಿದ್ದರು. ಬಾವು ಹೆಚ್ಚಾಗುತ್ತಿದ್ದಂತೆ ಪೋಷಕರು ಭಯಭೀತರಾಗಿದ್ದು, ನಂತರ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಪಿ.ಸೆಂದಿಲ್‍ನಾಥನ್ ತಿಳಿಸಿದ್ದಾರೆ.
Advertisement
Tamil Nadu: 526 teeth were removed from the lower jaw of a 7-year-old boy at a hospital in Chennai. Dr Senthilnathan says, "A 4×3 cm tumour was removed from the lower right side of his jaw, after that, we came to know that 526 teeth were present there." pic.twitter.com/yBGohNBa7r
— ANI (@ANI) July 31, 2019
ಎಕ್ಸ್-ರೇ ಹಾಗೂ ಸಿಟಿ ಸ್ಕ್ಯಾನ್ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹೆಚ್ಚು ಹಲ್ಲುಗಳಿರುವುದು ಕಂಡು ಬಂತು. ಹೀಗಾಗಿ ಸರ್ಜರಿ ಮಾಡಲು ನಿರ್ಧರಿಸಿದೆವು. ನಂತರ ಅರಿವಳಿಕೆ(ಅನಸ್ತೇಶಿಯಾ) ನೀಡಿ ಬಲಭಾಗದ ದವಡೆಯನ್ನು ತೆರೆದೆವು, ಅಲ್ಲಿ ಒಂದು ಚೀಲದ ರೀತಿ ಕಾಣಿಸಿತು. ಅದು ಸುಮಾರು 200 ಗ್ರಾಂ. ತೂಕವಿತ್ತು. ಆ ಚೀಲದ ತುಂಬ ಹಲ್ಲುಗಳಿದ್ದವು. ತುಂಬಾ ಎಚ್ಚರಿಕೆ ವಹಿಸಿ ಹಲ್ಲುಗಳನ್ನು ಹೊರ ತೆಗೆದೆವು. ಚೀಲ ತೆರೆದು ನೋಡಿದಾಗ ನೋಡಿದಾಗ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಪತ್ತೆಯಾಗಿವೆ ಎಂದು ಪಿ.ಸೆಂದಿಲ್‍ನಾಥನ್ ವಿವರಿಸಿದರು.
ಕೆಲವು ತುಂಬಾ ಸಣ್ಣ ಕಣಗಳಿದ್ದರೂ ಅವುಗಳಲ್ಲಿ ಹಲ್ಲುಗಳ ಗುಣಗಳಿರುತ್ತವೆ. ಆ ಚೀಲದಿಂದ ಹಲ್ಲುಗಳನ್ನು ತೆಗೆಯಲು ಸುಮಾರು 5 ತಾಸು ತೆಗೆದುಕೊಳ್ಳಲಾಗಿದೆ. ಹೊರ ತೆಗೆಯಲಾದ ಹಲ್ಲುಗಳು ಮುತ್ತಿನ ಆಕಾರದಲ್ಲಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಪ್ಯಾಥೋಲಜಿ ವಿಭಾಗದ ಮುಖ್ಯಸ್ಥೆ ಪ್ರತಿಭಾ ರಮಣಿ ಈ ಕುರಿತು ಮಾಹಿತಿ ನೀಡಿ, ಸರ್ಜರಿ ಮಾಡಿದ ಮೂರು ದಿನಗಳ ನಂತರ ಬಾಲಕ ಸಹಜ ಸ್ಥಿಗೆ ಮರಳಿದ್ದಾನೆ ಎಂದು ತಿಳಿಸಿದ್ದಾರೆ. ಬಾಯಿಯಲ್ಲಿ 526 ಹಲ್ಲುಗಳು ಪತ್ತೆಯಾಗಿದ್ದು ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.