ಬೆಂಗಳೂರು: ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ (Commercial Tax) ಇಲಾಖೆಯ ಜಾರಿ, ದಕ್ಷಿಣ ವಲಯ, ಬೆಂಗಳೂರು ವಿಭಾಗವು ಜಿಎಸ್‌ಟಿ ನಕಲಿ ಬಿಲ್ (GST Fake Bill) ತಯಾರಕರ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಈ ಜಾಲವು ಮಾನವ ಶಕ್ತಿ ಹಾಗೂ ಕಾರ್ಮಿಕ ಪೂರೈಕೆ ಸೇವಾ ವಲಯದ ಕಂಪನಿಗಳಿಗೆ ನಕಲಿ ಹೂಡುವಳಿ ತೆರಿಗೆ ಜಮೆಯ ವರ್ಗಾವಣೆ ಹಾಗೂ ಕೃತಕ ತೆರಿಗೆದಾಯಕ ವಹಿವಾಟನ್ನು ಸೃಜಿಸುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಿರುವುದನ್ನು ಪತ್ತೆ ಹಚ್ಚಲಾಗಿದೆ. ಸೇವಾ ವಲಯದಲ್ಲಿನ ನಕಲಿ ಬಿಲ್ ತಯಾರಿಕೆಯ ಜಾಲದ ಕಾರ್ಯಾಚರಣೆಯನ್ನು ಭೇದಿಸಿರುವುದು ಇದೇ ಮೊದಲು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?
Advertisement
Advertisement
ಈ ಜಾಲವು ಕುಟುಂಬ ಸದಸ್ಯರ, ಸಂಬಂಧಿಕರ, ಸ್ನೇಹಿತರ ಹಾಗೂ ಇತರೆ ವ್ಯಕ್ತಿಗಳ ಗುರುತು ದಾಖಲಾತಿಗಳನ್ನು ಉಪಯೋಗಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಸೃಷ್ಟಿಸಿರುವುದು ಜಾರಿ ವಿಭಾಗದ ತನಿಖೆಯಿಂದ ಬೆಳಕಿಗೆ ಬಂದಿರುತ್ತದೆ. ಈ ಜಾಲವು ಸುಮಾರು 525 ಕೋಟಿ ರೂ. ನಕಲಿ ವಹಿವಾಟನ್ನು ನಡೆಸಿದ್ದು ಸರ್ಕಾರದ ಬೊಕ್ಕಸಕ್ಕೆ ಸುಮಾರು 90 ಕೋಟಿ ರೂ. ರೂಪಾಯಿಗಳಷ್ಟು ತೆರಿಗೆ ನಷ್ಟವನ್ನು ಉಂಟು ಮಾಡಿರುವುದಾಗಿ ಅಂದಾಜಿಸಲಾಗಿದೆ.
Advertisement
ಈ ಜಾಲದ ಸೂತ್ರಧಾರರಾದ ಗುರುಪ್ರಕಾಶ್ ಹೆಚ್ ಎಂ ಮತ್ತು ಮಂಜುನಾಥಯ್ಯ ಹೆಚ್ ಎಂ ಇವರನ್ನು ಬುಧವಾರ ಮುಂಜಾನೆ ಬಂಧಿಸಲಾಗಿದ್ದು, ಈ ಸಂಬಂಧ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಯಿದೆ.
Advertisement
ನಕಲಿ ಬಿಲ್ ತಯಾರಿಕೆ ಹಾಗೂ ತೆರಿಗೆ ತಪ್ಪಿಸುವಿಕೆಯು ಜಿಎಸ್‌ಟಿ ಕಾನೂನಿನಡಿ (GST Law) ಶಿಕ್ಷಾರ್ಹ ಅಪರಾಧವಾಗಿದೆ. ಕೃತ್ಯ ಸಾಬೀತಾದರೆ ಬಂಧನ, ದಂಡದ ಜೊತೆಗೆ ಸರಕು, ಸ್ವತ್ತುಗಳ ಮತ್ತು ಬ್ಯಾಂಕ್ ಖಾತೆಗಳ ಮುಟ್ಟುಗೋಲು ಹಾಕಲಾಗುತ್ತದೆ.
Web Stories