– 12 ಲಕ್ಷ ಗಡಿ ದಾಟಿದ ಗುಣಮುಖರಾದವರ ಸಂಖ್ಯೆ
ನವದೆಹಲಿ: ಚೀನಿ ವೈರಸ್ ಕೋವಿಡ್ 19 ದಿನದಿಂದ ದಿನಕ್ಕೆ ಕಂಬಂಧ ಬಾಹುವನ್ನು ಪಸರಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 52,050 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 18,55,746ಕ್ಕೆ ಏರಿಕೆಯಾಗಿದೆ.
Single-day spike of 52,050 positive cases & 803 deaths in India in the last 24 hours.
India's #COVID19 tally rises to 18,55,746 including 586298 active cases, 1230510 cured/discharged/migrated & 38938 deaths: Health Ministry pic.twitter.com/HVt5wRKeFy
— ANI (@ANI) August 4, 2020
Advertisement
ಸೋಮವಾರ ಒಂದೇ ದಿನ 803 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ 5,86,298 ಸಕ್ರಿಯ ಪ್ರಕರಣಗಳಿದ್ದು, 1,230,510 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದೂವರೆಗೂ 38,838 ಮಂದಿ ಹೆಮ್ಮಾರಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ.
Advertisement
6,61,715 #COVID19 tests conducted in India in the last 24 hours: Ministry of Health and Family Welfare
— ANI (@ANI) August 4, 2020
Advertisement
ಕಳೆದ 24 ಗಂಟೆಯಲ್ಲಿ ಇಡೀ ದೇಶದಲ್ಲಿ 6,61,715 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಶೇ.65.77 ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಸದ್ಯ ದೇಶದಲ್ಲಿ ಅನ್‍ಲಾಕ್ 3.ಒ ನಡೆಯುತ್ತಿದೆ.