ಶ್ರೀನಗರ: 13 ಮಕ್ಕಳ ತಂದೆ 10 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿ ವಿಕೃತಿ ಮೆರೆದಿದ್ದಾನೆ.
ಸಂತ್ರಸ್ತೆಯ ಪೋಷಕರು ದೂರು ನೀಡಿದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಗಾಗಿ ಜಾಲ ಬೀಸಿದ್ದೇವೆ ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.
Advertisement
ನಮ್ಮ 10 ವರ್ಷದ ಮಗಳ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ಅವಳ ನಗ್ನ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಡೆಪ್ಯೂಟಿ ಸೂಪರಿಟೆಂಡೆಂಟ್ ರಿಯಾಜ್ ಥಾಂಟ್ರೇ ಹೇಳಿದ್ದಾರೆ.
Advertisement
ಈ ಘಟನೆ ನಡೆದು ಸುಮಾರು 25 ದಿನಗಳಾಗಿದೆ. ಆರೋಪಿಗೆ 52 ವಯಸ್ಸಾಗಿದ್ದು, ಆತನಿಗೆ 2 ಹೆಂಡತಿಯರು ಹಾಗೂ 13 ಮಕ್ಕಳಿದ್ದಾರೆ. ಸಂತ್ರಸ್ತೆ 6ನೇ ತರಗತಿ ಓದುತ್ತಿದ್ದಳು ಎಂದು ಥಾಂಟ್ರೇ ತಿಳಿಸಿದರು.
Advertisement
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅದು ಮುಗಿದ ನಂತರ ಆಕೆಯನ್ನು ಪೋಷಕರಿಗೆ ಒಪ್ಪಿಸುತ್ತೇವೆ ಎಂದು ಹೇಳಿದರು.
Advertisement
ಇದನ್ನು ಓದಿ: ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್
ಇದನ್ನು ಒದಿ: ಬಾಡಿಗೆಗೆ ಮನೆ ಕೊಟ್ಟು ಕ್ಯಾಮೆರಾ ಇಟ್ಟ- ಗಂಡ, ಹೆಂಡ್ತಿ ಬೆತ್ತಲೆ ವಿಡಿಯೋ ವೆಬ್ಸೈಟ್ಗೆ ಹಾಕಿದ ಕಾಮುಕ