ಮುಂಬೈ: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ 52 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮಂಗಳವಾರ ಪುಣೆಯ ಪಿಂಪ್ರಿ ಚಿಂಚ್‍ವಾಡ್‍ನಲ್ಲಿ ಸಾವನ್ನಪ್ಪಿದ್ದಾರೆ.
ವ್ಯಕ್ತಿ ನೈಜೀರಿಯಾ ಟ್ರಾವೆಲ್ ಹಿಸ್ಟ್ರಿ ಹೊಂದಿದ್ದು, ಅವರಿಗೆ ಕಳೆದ 13 ವರ್ಷಗಳಿಂದ ಮಧುಮೇಹ ಕಾಯಿಲೆ ಇತ್ತು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೋವಿಡ್-19 ಕಾರಣಗಳಿಂದ ವ್ಯಕ್ತಿ ಸಾವನ್ನಪ್ಪಿಲ್ಲ. ಆದರೆ ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿಗೆ ವ್ಯಕ್ತಿ ಒಳಗಾಗಿದ್ದರು ಎಂದು ನ್ಯಾಶನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿ ತಿಳಿಸಿದೆ. ಇದನ್ನೂ ಓದಿ: ಕೋವಿಡ್ ಲಸಿಕೆಯ 4ನೇ ಬೂಸ್ಟರ್ ಡೋಸ್‌ಗೆ ಇಸ್ರೇಲ್ ಅನುಮೋದನೆ
Advertisement
Advertisement
ಮಹಾರಾಷ್ಟ್ರದಲ್ಲಿ ಗುರುವಾರ 198 ಹೊಸ ಕೋವಿಡ್-19 ಓಮಿಕ್ರಾನ್ ರೂಪಾಂತರಿ ತಳಿ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೂ ಒಟ್ಟು 450 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದೆ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‍ಐವಿ) ವರದಿ ಮಾಡಿರುವ 198 ರೋಗಿಗಳಲ್ಲಿ 30 ಜನರು ಅಂತರರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ ಎಂದು ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ದೇಶದಲ್ಲಿ 1 ಸಾವಿರ ಗಡಿ ದಾಟಿದ ಓಮಿಕ್ರಾನ್