ವಾಷಿಂಗ್ಟನ್: ಬಟ್ಟೆಯೊಳಗೆ 52 ಹಲ್ಲಿ ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯ ಬಂಧಿಸಲಾಗಿದೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
30 ವರ್ಷದ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. ಈತ ಹಲ್ಲಿ, ಹಾವುಗಳನ್ನು ಬಚ್ಚಿಟ್ಟುಕೊಂಡು ಕ್ಯಾಲಿಫೋರ್ನಿಯಾದಲ್ಲಿ ಯುಎಸ್ ಗಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೇಶಾದ್ಯಂತ ಸುದ್ದಿಯಾಗಿದ್ದ ಹತ್ರಾಸ್, ಲಖೀಂಪುರದಲ್ಲಿ ಬಿಜೆಪಿಗೆ ಮುನ್ನಡೆ
Advertisement
ನಡೆದಿದ್ದೇನು?: ಫೆ. 25 ರಂದು ಮೆಕ್ಸಿಕೋದಿಂದ ಸ್ಯಾನ್ ಯಸಿಡ್ರೊ ಗಡಿ ದಾಟಲು ಹೊರಟಿದ್ದನು. ಈ ವೇಳೆ ಹೆಚ್ಚುವರಿ ತಪಾಸಣೆ ಮಾಡಿದಾಗ ಹಲ್ಲಿ, ಹಾವುಗಳು ಕಂಡುಬಂದಿದೆ. ಒಂಬತ್ತು ಹಾವುಗಳು, 43 ಕೊಂಬಿನ ಹಲ್ಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಟ್ರಕ್‍ನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಹೇಳಿಕೆಯಲ್ಲಿ ತಿಳಿಸಿದೆ.
Advertisement
Advertisement
ಸದ್ಯ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಆತ ಜಾಕೆಟ್, ಪ್ಯಾಂಟ್ ಪಾಕೆಟ್‍ಗಳು ಮತ್ತು ತೊಡೆಸಂದು ಪ್ರದೇಶದಲ್ಲಿ ಸಣ್ಣ ಚೀಲಗಳಲ್ಲಿ 52 ಹಲ್ಲಿಗಳು ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡಿದ್ದನು. ವ್ಯಕ್ತಿಯ ಬಟ್ಟೆಯ ಒಳಗೆ ಹಾವು, ಹಲ್ಲಿಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ ಎಂದು ಯುಎಸ್ ಗಡಿ ಏಜೆಂಟರು ತಿಳಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ
Advertisement
ಕಳ್ಳಸಾಗಾಣಿಕೆ ಮಾಡಲು ಜನರು ವಿವಿಧ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಾರೆ. ಆದರೆ ಬಾರ್ಡರ್‌ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಅಷ್ಟು ಸುಲಭವಾಗಿ ಪ್ರಾಣಿಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಕಳ್ಳ ಸಾಗಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಸ್ಯಾನ್ ಡಿಯಾಗೋದಲ್ಲಿನ ಕ್ಷೇತ್ರ ಕಾರ್ಯಾಚರಣೆಗಳ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ನಿರ್ದೇಶಕ ಸಿಡ್ನಿ ಅಕಿ ತಿಳಿಸಿದ್ದಾರೆ.