– ಬಳ್ಳಾರಿಯಲ್ಲಿ 579 ಮಂದಿಗೆ ಕೊರೊನಾ
– ನಾಳೆ 1 ಲಕ್ಷಕ್ಕೆ ಏರಿಕೆ ಸಾಧ್ಯತೆ
ಬೆಂಗಳೂರು: ಸತತ ನಾಲ್ಕನೇಯ ದಿನ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಬಂದಿದ್ದು, ಇದೇ ರೀತಿಯ ಸಂಖ್ಯೆ ಬಂದರೆ ಸೋಮವಾರ ರಾಜ್ಯ ಸೋಂಕಿತರ ಸಂಖ್ಯೆಯಲ್ಲಿ 1 ಲಕ್ಷದ ಗಡಿಯನ್ನು ದಾಟಲಿದೆ.
Advertisement
ಇಂದು ಒಟ್ಟು 5,199 ಮಂದಿಗೆ ಸೋಂಕು ಬಂದಿದ್ದು, 82 ಮಂದಿ ಮೃತಪಟ್ಟಿದ್ದಾರೆ. 2,088 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 96,141 ಮಂದಿಗೆ ಸೋಂಕು ಬಂದಿದ್ದು, ಇಲ್ಲಿಯವರೆಗೆ 1,878 ಮಂದಿ ಮೃತಪಟ್ಟಿದ್ದಾರೆ.
Advertisement
Advertisement
96 ಸಾವಿರ ಸೋಂಕಿತರ ಪೈಕಿ 58,417 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 35,838 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 632 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸುಶಾಂತ್ ಪ್ರಕರಣ – ಮಹೇಶ್ ಭಟ್, ಕರಣ್ ಜೋಹರ್ ಮ್ಯಾನೇಜರ್‌ಗೆ ಸಮನ್ಸ್
Advertisement
ಇಂದು 12,531 ರ‍್ಯಾಪಿಡ್ ಟೆಸ್ಟ್, 21,034 ಆರ್‌ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 33,565 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 61,560 ಮಂದಿಗೆ ರ‍್ಯಾಪಿಡ್ ಟೆಸ್ಟ್, 11,15,267 ಮಂದಿಗೆ ಆರ್‌ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 11,76,827 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 1950, ಬಳ್ಳಾರಿಯಲ್ಲಿ 579, ಮೈಸೂರು 230, ಬೆಂಗಳೂರು ಗ್ರಾಮಾಂತರ 213 ಮಂದಿಗೆ ಸೋಂಕು ಬಂದಿದೆ. ಬೆಂಗಳೂರಿನಲ್ಲಿ 647, ಬೆಳಗಾವಿ 173, ದಕ್ಷಿಣ ಕನ್ನಡ 147, ಬಾಗಲಕೋಟೆ 153, ವಿಜಯಪುರ 143, ಕಲಬುರಗಿ 132 ಮಂದಿ ಬಿಡುಗಡೆಯಾಗಿದ್ದಾರೆ.
ಕರ್ನಾಟಕದಲ್ಲಿ ಚೇತರಿಕೆ ಪ್ರಕರಣ ಶೇ.37.28 ಇದ್ದರೆ ಮರಣ ಪ್ರಮಾಣ ಶೇ.1.95 ಇದೆ. ಬೆಂಗಳೂರಿನಲ್ಲಿ 33,155 ಸಕ್ರಿಯ ಪ್ರಕರಣಗಳಿದ್ದು ಚೇತರಿಕೆ ಪ್ರಮಾಣ ಶೇ.25.09 ಇದ್ದರೆ ಮರಣ ಪ್ರಮಾಣ ಶೇ.1.96ರಷ್ಟಿದೆ.