ಹೊಸ ವರ್ಷದ ಎಣ್ಣೆ ಏಟಲ್ಲಿ ವಾಹನ ಚಾಲನೆ – ಒಂದೇ ರಾತ್ರಿ 513 ಕೇಸ್ ದಾಖಲು

Public TV
1 Min Read
drunk drive

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಎಣ್ಣೆ ಪಾರ್ಟಿ ಮಾಡಿ ವಾಹನ ಚಲಾಯಿಸಿದವರ ಮೇಲೆ, ಒಂದೇ ರಾತ್ರಿಯಲ್ಲಿ ಬರೋಬ್ಬರಿ 513 ಕೇಸ್ ಬಿದ್ದಿದೆ.

ನ್ಯೂ ಇಯರ್ ರಾತ್ರಿ 513 ಡ್ರಂಕ್ & ಡ್ರೈವ್‌ (Drunk And Drive) ಪ್ರಕರಣಗಳು ದಾಖಲಾಗಿವೆ. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ಸುಮಾರು 28,127 ವಾಹನಗಳ ಪರಿಶೀಲನೆ ಮಾಡಿದ್ದರು. ಇದನ್ನೂ ಓದಿ: ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

traffic police fine

ಹೊಸ ವರ್ಷದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸಂಭ್ರಮ ಮನೆ ಮಾಡಿತ್ತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌, ವೈಟ್‌ಫೀಲ್ಡ್ ಮೊದಲಾದ ಕಡೆ ಯುವಜನತೆ ನ್ಯೂ ಇಯರ್ ಸಂಭ್ರಮದಲ್ಲಿ ತೇಲಿದರು.

ಯುವಕ-ಯುವತಿಯರು ಅನೇಕರು ಎಣ್ಣೆ ಕುಡಿದು ನಶೆಯಲ್ಲಿ ತೇಲಿದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಮತ್ತಿನಲ್ಲಿ ಕುಸಿದ ಬಿದ್ದ ಕೆಲ ಯುವತಿಯರನ್ನು ಅವರ ಗೆಳೆಯರು ಕರೆದೊಯ್ದ ಘಟನೆಗಳು ನಡೆದವು. ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

Share This Article