ಕೊಪ್ಪಳ: ಮದುವೆ ಎನ್ನುವುದು ಎಲ್ಲರಿಗೂ ಮರೆಯಲಾಗದ ದಿನವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ದಿನ ಕುಣಿದು ಕುಪ್ಪಳಿಸ್ತಾರೆ. ಆದರೆ ಕೊಪ್ಪಳದಲ್ಲಿ ಸಾಮೂಹಿಕ ವಿವಾಹದಲ್ಲಿ 51 ಜೋಡಿಗಳು ಜಗತ್ತೆ ಮೆಚ್ಚುವ ಕೆಲಸ ಮಾಡಿದ್ದಾರೆ.
ಎಲ್ಲರ ಜೀವನದಲ್ಲೂ ಮದುವೆ ಎನ್ನುವುದು ಒಂದು ಸಂತಸದ ಕ್ಷಣ. ಮದುವೆಯ ಆ ಕ್ಷಣ ನೆನಪಿನಲ್ಲಿ ಉಳಿಯೋಕೆ ಕೆಲವರು ದಾಮ್ ದುಮ್ ಎಂದು ಖರ್ಚು ಮಾಡಿ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಕೊಪ್ಪಳದ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನೆಡೆದ ಸಾಮೂಹಿಕ ಮದುವೆ ಎಲ್ಲರ ಗಮನ ಸೆಳೆಯಿತು. ಭಾನುವಾರ ಬರೋಬ್ಬರಿ 51 ನವ ಜೋಡಿಗಳು ಹಸೆಮಣೆ ಎರಿದರು. ಈ ವೇಳೆ ನವ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಸಾಮೂಹಿಕವಾಗಿ ನೇತ್ರದಾನದ ಶಪಥ ಮಾಡಿದರು.
Advertisement
Advertisement
ಅಂಧರ ಬಾಳಿಗೆ ಬೆಳಕು ಕೊಡುವುದಕ್ಕೆ ನಿರ್ಧಾರ ಮಾಡಿದ ನವ ಜೋಡಿಗಳು ಮದುವೆಯ ಸಂದರ್ಭದಲ್ಲೆ ಇಂತಹದೊಂದು ನಿರ್ಣಯ ತೆಗೆದುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನೂ ನಾವು ಸತ್ತ ಮೇಲೂ ಜಗತ್ತನ್ನೂ ನೋಡಬೇಕು ಅಂದರೆ ನೇತ್ರದಾನ ಮಾಡಬೇಕು ಎಂದು ನವ ಜಿವನಕ್ಕೆ ಕಾಲಿಟ್ಟ ವಧು ಹೇಳಿದ್ದರು.
Advertisement
ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ನವಜೋಡಿಗಳು ನೇತ್ರದಾನ ಶಪಥ ಮಾಡಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಸಮರ್ಪಣಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ 51 ಜೋಡಿಗಳ ಸರಳ ಸಾಮೂಹಿಕ ವಿವಾಹದಲ್ಲಿ ಅಂಧರ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ. ದಾನದಲ್ಲಿ ಶ್ರೇಷ್ಠದಾನ ನೇತ್ರದಾನ, ಇಂತಹ ನೇತ್ರದಾನ ಮಾಡುವ ಮೂಲಕ ಈ ನವ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಅಂಬೇಡ್ಕರ್ ಯುವಕ ಸಂಘ ಈ ಬಾರಿ ತುಸು ವಿಭಿನ್ನವಾಗಿ ಸಾಮಾಜಿಕ ಜಾಗೃತಿ ಕಾರ್ಯಕ್ರಮದ ಮೂಲಕ ಮದುವೆ ಮಾಡಿಕೊಟ್ಟರು. ಮದುವೆಯಾದ 51 ಜೋಡಿಗಳಿಗೆ ಸಸಿ ವಿತರಣೆ ಮಾಡಿ ಮದುವೆಯಲ್ಲಿ ಪರಿಸರ ಕಾಳಜಿ ಮೆರೆದಿದ್ದಾರೆ.