ನವದೆಹಲಿ: ವಿಮಾನದಲ್ಲಿ ಆಹಾರ ದುಬಾರಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಗುವ ಆಹಾರ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಎಲ್ಲರ ನಂಬಿಕೆ. ಆದರೆ ವ್ಯಕ್ತಿಯೋರ್ವ ರೈಲಿನಲ್ಲಿ ಕೇವಲ ಒಂದು ಗ್ಲಾಸ್ ಚಹಾ ಕುಡಿಯಲು 70 ರೂ. ಖರ್ಚು ಮಾಡಿದ್ದಾನೆ. ಚಹಾ ಕೇವಲ 20ರೂ ಆಗಿದ್ದರೆ, ಅದರ ಸೇವಾಶುಲ್ಕವೇ 50ರೂ. ಆಗಿರುವುದು ಕಂಡು ಎಲ್ಲರಿಗೂ ಶಾಕ್ ಆಗಿದೆ.
ಜೂನ್ 28 ರಂದು ದೆಹಲಿಯಿಂದ ಭೋಪಾಲ್‍ಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸದ್ಯ ತೆರಿಗೆ ಇನ್‍ವಾಯ್ಸ್‍ಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತಿ – 40 ಮಹಿಳೆಯರೊಂದಿಗೆ ಶಿಕ್ಷಕ ರಾಸಲೀಲೆ
20 रुपये की चाय पर 50 रुपये का टैक्स, सच मे देश का अर्थशास्त्र बदल गया, अभी तक तो इतिहास ही बदला था! pic.twitter.com/ZfPhxilurY
— Balgovind Verma (@balgovind7777) June 29, 2022
ಪ್ರಯಾಣಿಕರು ರೈಲಿನ ಟಿಕೆಟ್ ಬುಕ್ ಮಾಡುವಾಗಲೇ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡದೇ, ಪ್ರಯಾಣಿಸುವ ವೇಳೆ ಏನನ್ನಾದರೂ ಆರ್ಡರ್ ಮಾಡಿದರೆ, ಅವರು 50 ರೂ. ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸುತ್ತೋಲೆಯನ್ನು 2018ರಲ್ಲಿಯೇ ಹೊರಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದಕ್ಷಿಣ ಇರಾನ್‍ನಲ್ಲಿ ಭೂಕಂಪನ- ಮೂವರು ಸಾವು, 16 ಮಂದಿಗೆ ಗಂಭೀರ ಗಾಯ
ಅದರಂತೆ ಶತಾಬ್ದಿ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್‍ನಲ್ಲಿ ಪ್ರಯಾಣಿಸುವ ವೇಳೆ ಆಹಾರ, ಚಹಾ ಅಥವಾ ಕಾಫಿಯನ್ನು ಆರ್ಡರ್ ಮಾಡಿದರೆ ಹೆಚ್ಚುವರಿಯಾಗಿ 50 ರೂಪಾಯಿ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮುನ್ನ ಶತಾಬ್ದಿ ಹಾಗೂ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಹಾರ ಉಚಿತವಾಗಿತ್ತು. ಆದರೆ ಇದೀಗ ಆಹಾರದ ದರ ಕಡಿತಗೊಳಿಸಲಾಗಿದೆ. ಒಂದು ವೇಳೆ ಪ್ರಯಾಣದ ವೆಳೆ ಊಟ ಆರ್ಡರ್ ಮಾಡಿದರೆ ಹೆಚ್ಚು ಶುಲ್ಕವನ್ನು ವಿಧಿಸಲಾಗುತ್ತದೆ.