ಕೊಲ್ಕತ್ತಾ: ರಾಷ್ಟ್ರಪತಿ ಅಭ್ಯರ್ಥಿ, ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬೆಂಬಲಿಸದ ಹಿನ್ನೆಲೆ ಅವರನ್ನು ‘ಬುಡಕಟ್ಟು ವಿರೋಧಿ’ ಎಂದು ಬಿಜೆಪಿ 50,000 ಪೋಸ್ಟರ್‌ಗಳನ್ನು ಹಾಕಿದೆ.
Advertisement
ಪಶ್ಚಿಮ ಬಂಗಾಳದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ ವಿರುದ್ಧ ಪೋಸ್ಟರ್ ಹಾಕಿದ್ದು, ಬುಡಕಟ್ಟು ಹುಡುಗಿಯರು ಹಡ್‌ಗ್ಲೋವ್ಸ್ ಹಾಕಿ ಬ್ಯಾನರ್ಜಿ ಅವರ ಕೈ ಹಿಡಿದು ನೃತ್ಯ ಮಾಡುತ್ತಿರುವ ಫೋಟೋವನ್ನು ಪೋಸ್ಟರ್‌ನಲ್ಲಿ ಹಾಕಲಾಗಿದೆ. ಬೆಂಗಾಲಿ ಭಾಷೆಯಲ್ಲಿ, ಬಿಜೆಪಿ ಪಕ್ಷ ಬುಡಕಟ್ಟು ಮಹಿಳೆಯನ್ನು ನಾಮನಿರ್ದೇಶನ ಮಾಡುವ ಮೂಲಕ ಬುಡಕಟ್ಟು ಸಮುದಾಯವನ್ನು ಅಭಿನಂದಿಸಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ಬುಡಕಟ್ಟು ಮಹಿಳೆಯರನ್ನು ಬೆಂಬಲಿಸದೆ ಬೇರೆಯವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಬರೆದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ
Advertisement
Advertisement
ಇನ್ನೂ ಮುಂದುವರಿದ ಅವರು, ಬ್ಯಾನರ್ಜಿ ಬುಡಕಟ್ಟು ಜನಾಂಗದ ವಿರೋಧಿ. ಅದಕ್ಕೆ ಅವರು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಿಲ್ಲ ಎಂದು ಬರೆದು ಪೋಸ್ಟರ್‌ಗಳನ್ನು ಹಾಕಿದೆ. ಇದೇ ಪೋಸ್ಟರ್ ಅನ್ನು ಎಲ್ಲ ಪ್ರಮುಖ ಬುಡಕಟ್ಟು ಪ್ರದೇಶಗಳಲ್ಲಿ ಹಾಕಲಾಗಿದೆ.
Advertisement
ಬ್ಯಾನರ್ಜಿ ಅವರು ಬುಡಕಟ್ಟು ಜನಾಂಗದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬುಡಕಟ್ಟು ಹುಡುಗಿಯರ ಹಡ್‌ಗ್ಲೋವ್ಸ್ ಹಾಕಿ ಬ್ಯಾನರ್ಜಿ ಅವರ ಕೈ ಹಿಡಿದು ಬುಡಕಟ್ಟು ನೃತ್ಯ ಮಾಡಿದ್ದರು. ಈ ಫೋಟೋಗಳನ್ನು ಬಿಜೆಪಿ ಪೋಸ್ಟರ್‌ಗೆ ಬಳಸಿದೆ.