ಬೆಂಗಳೂರು: ಸಾಮಾನ್ಯವಾಗಿ ಎರಡು ತಿಂಗಳು ವಿದ್ಯುತ್ ಬಿಲ್ (Electricity Bill) ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಡುತ್ತೆ ಬೆಸ್ಕಾಂ. ಅದರೆ ಸರ್ಕಾರಿ ಇಲಾಖೆಗಳಿಗೆ ಮಾತ್ರ ಈ ನಿಯಮ ಪಾಲನೆ ಮಾಡೋದೇ ಇಲ್ಲ. ಇದಕ್ಕೆ ಸಾಕ್ಷಿ ನಮ್ಮ ಬೆಂಗಳೂರಿನ (Bengaluru) ಸರ್ಕಾರಿ ಕಚೇರಿಗಳು (Government Office) 5,058 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
Advertisement
ಸರ್ಕಾರಿ ಕಚೇರಿಗಳು ಬೆಸ್ಕಾಂ ಬಿಲ್ ಪಾವತಿ ಮಾಡದೇ ಕೋಟಿ ಕೋಟಿ ಬಿಲ್ ಬಾಕಿ ಉಳಿಸಿಕೊಂಡಿವೆ. ಬಿಬಿಎಂಪಿ (BBMP), ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಕಚೇರಿಗಳು, ಸಣ್ಣ, ಮಧ್ಯಮ ನೀರಾವರಿ ಇಲಾಖೆ ಸೇರಿ ಹಲವು ಕಚೇರಿಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಯಾಕೆ ಈ ಇಲಾಖೆಗಳಲ್ಲಿ ಕರೆಂಟ್ ಬಿಲ್ ಕಟ್ಟೋಕೂ ದುಡ್ಡಿಲ್ವಾ ಅನ್ಕೋಬೇಡಿ. ಸರ್ಕಾರಿ ಇಲಾಖೆಗಳಲ್ಲಿ ಶೇಕಡಾ 60 ರಷ್ಟು ಹಣ ವಿದ್ಯುತ್ ಬಿಲ್‍ಗಾಗಿ ಮೀಸಲಿದ್ದರೂ, ಸರ್ಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೇ ಬಿಲ್ ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ
Advertisement
Advertisement
ಕಚೇರಿಗಳಿಗೆ ಒತ್ತಡ ತಂದು ವಿದ್ಯುತ್ ಬಿಲ್ ಕಲೆಕ್ಟ್ ಮಾಡ್ತಿದ್ದೇವೆ. ಸರ್ಕಾರಿ ಕಚೇರಿಗಳಿಗೂ ವಿದ್ಯುತ್ ಸಂಪರ್ಕ ಕಟ್ ಮಾಡಬಹುದು. ನಾವು ಕಟ್ ಮಾಡಿದರೆ ಜನರ ಮೇಲೆ ಪರಿಣಾಮ ಬಿರುತ್ತೆ. ಸಾಮಾನ್ಯ ಜನಕ್ಕೆ ಮಾತ್ರ ಇದು ಉಲ್ಟಾ. ಮೀಟರ್ ಕಲೆಕ್ಷನ್ ತೆಗೆದುಕೊಳ್ಳುವಾಗ್ಲೇ ಎರಡು ತಿಂಗಳ ಡೆಪಾಸಿಟ್ ಕಟ್ಟಿಸಿಕೊಂಡಿರುತ್ತೇವೆ. ಎರಡು ತಿಂಗಳು ಕಟ್ಟಿಲ್ಲ ಅಂತ ಇದ್ರೆ ಮೀಟರ್ ತೆಗೆಯಲಾಗುತ್ತೆ. ಮನೆಯಲ್ಲಿ ವಾಸ ಇದ್ದರೆ ಒತ್ತಡ ಹಾಕ್ತೀವಿ. ಮನೆಯಲ್ಲಿ ಯಾರೂ ಇಲ್ಲದೆ ಇರೋದು, ಒತ್ತಡ ತಂದ ನಂತರವೂ ಕಟ್ಟಿಲ್ಲ ಅಂದ್ರೂ ನಾವು ಮೀಟರ್ ತೆಗೆದು ಹಾಕ್ತೀವಿ. ಅದರೆ ಸರ್ಕಾರಿ ಕಚೇರಿಗಳಲ್ಲಿ ಡಿಸ್ಕನೆಕ್ಟ್ ಮಾಡಿದರೆ ಜನರಿಗೆ ತೊಂದರೆಯಾಗುತ್ತದೆ. ಸರ್ಕಾರಿ ಕಚೇರಿಗಳಿಗೆ ವಸೂಲಿ ಮಾಡಲು ಪ್ರಯತ್ನಪಡ್ತಿದ್ದೇವೆ. ಕೇಂದ್ರ ಸರ್ಕಾರದ RDSS ಸ್ಕೀಮ್ ಇದೆ. ಅದ್ರಲ್ಲಿ ಸರ್ಕಾರಿ ಕಚೇರಿಗಳಿಗೆ ಪ್ರಿ-ಪೇಯ್ಡ್ ಆಗಿ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತೆ ಎಂದು ಸ್ಥಳೀಯ ಆಧಿಕಾರಿಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಯುವತಿಯ ಮತ್ತೊಂದು ವರಸೆ- ಜೈಲಿಗಾದ್ರೂ ಹಾಕಿ, ನೇಣಿಗಾದ್ರೂ ಹಾಕಿ, ಭಾರತದಲ್ಲೇ ಇರ್ತೀನಿ!
Advertisement
ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದ್ಯುತ್ ಕನೆಕ್ಷನ್ ಕಟ್ ಮಾಡುವ ಬೆಸ್ಕಾಂ ಅಧಿಕಾರಿಗಳು ಸರ್ಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಈಗ ಪ್ರೀ-ಪೇಯ್ಡ್ ಮೊರೆ ಹೋಗ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k