ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ. ಈ ಒಂದು ಆದೇಶ ಸಿಎಂಗೆ ಮುಳ್ಳಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.
2001 ರಲ್ಲೇ ದೇವನೂರು ಬಡಾವಣೆ ನಿರ್ಮಾಣವಾಗಿದೆ ಎಂದು ಖುದ್ದು ಸಿಎಂ ಪತ್ನಿ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ. ಇದೀಗ ಆ ಸೈಟ್ ಕೊಟ್ಟಿರುವುದು ನಿಯಮ ಬಾಹಿರ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಬಂದಿದೆ. ಇದನ್ನೂ ಓದಿ: ಮುಡಾ ಹಿಂದಿನ ಆಯುಕ್ತರ ಅಮಾನತು ಆದೇಶವೇ ಸರ್ಕಾರಕ್ಕೆ ಸುಸೈಡ್ ನೋಟ್: ಶಾಸಕ ಶ್ರೀವತ್ಸ
Advertisement
Advertisement
ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅಮಾನತು ಆದೇಶದಲ್ಲೇ ರಾಜ್ಯ ಸರ್ಕಾರ ಹಲವು ಸತ್ಯ ಬಿಚ್ಚಿಟ್ಟಿದೆ. ಸರ್ಕಾರದ ಅಮಾನತು ಆದೇಶದ ಅಂಶಗಳೇ ಸಿಎಂಗೆ ಮುಳ್ಳಾಗಿದೆ.
Advertisement
50:50 ಅನುಪಾತ 2009 ರಲ್ಲಿ ಜಾರಿಗೆ ಬಂದಿದೆ. 2009 ಕ್ಕಿಂತ ಹಿಂದಿನ ಹಳೆ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲ. ಆದರೆ ಪ್ರಾಧಿಕಾರ 2009 ಹಿಂದಿನ ಬಡಾವಣೆಗಳ ಬದಲಿ ನಿವೇಶನಗಳಿಗಾಗಿ ಮಂಜೂರಾತಿಗಾಗಿ 50:50 ಅನುಪಾತ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್!
Advertisement
ಸಿಎಂ ಪತ್ನಿಯ ಸಹೋದರನ ಜಾಗವನ್ನು ಮೂಡಾ (MUDA Scam) ವಶಪಡಿಸಿಕೊಂಡಿರೋದು 2001 ರಲ್ಲಿ. ಅಲ್ಲಿಗೆ 50:50 ಅನುಪಾತ ಇದಕ್ಕೆ ಅನ್ವಯ ಆಗಲ್ಲ. ಇದೀಗಾ ಸರ್ಕಾರಿ ಆದೇಶವೇ ಸಿಎಂಗೆ ಮುಳ್ಳಾಗುವ ಸಾಧ್ಯತೆಯಿದೆ.