– ಬೆಂಗಳೂರಿನಲ್ಲಿ 2,267 ಮಂದಿಗೆ ಸೋಂಕು
– ಇಂದು 29,819 ಮಂದಿಗೆ ಪರೀಕ್ಷೆ
ಬೆಂಗಳೂರು: ಸತತ ಎರಡನೇ ದಿನವೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಗುರುವಾರ 5,030 ಮಂದಿಗೆ ಸೋಂಕು ಬಂದಿದ್ದರೆ ಇಂದು 5,007 ಮಂದಿಗೆ ಸೋಂಕು ಬಂದಿದೆ.
ಇಂದು 110 ಮಂದಿ ಮೃತಪಟ್ಟಿದ್ದು, ಒಟ್ಟು 2,037 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 85,870ಕ್ಕೆ ಏರಿಕೆಯಾಗಿದೆ.
ಈ ಪೈಕಿ 52,791 ಸಕ್ರಿಯ ಪ್ರಕರಣಗಳಿದ್ದರೆ, 31,347 ,ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1,774 ಮಂದಿ ಮೃತಪಟ್ಟಿದ್ದು, 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 640 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು 7,411 ಮಂದಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ 22,408 ಆರ್‌ಟಿ ಪಿಸಿಆರ್ ಇತರೇ ಪರೀಕ್ಷೆ ಸೇರಿದಂತೆ ಒಟ್ಟು 29,819 ಮಂದಿಗೆ ಕೋವಿಡ್ 19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು ರಾಜ್ಯದಲ್ಲಿ 11,10,497 ಮಂದಿಗೆ ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಇಂದು ಇಂದು ಅತ್ಯಧಿಕ ಪ್ರಕರಣಗಳು ಬೆಂಗಳೂರಿನಲ್ಲಿ ಬಂದಿದೆ. ಬೆಂಗಳೂರು 2,267, ಮೈಸೂರು 281, ಉಡುಪಿ 190, ಬಾಗಲಕೋಟೆ 184, ದಕ್ಷಿಣ ಕನ್ನಡ 180, ಧಾರವಾಡ 174, ಕಲಬುರಗಿ 159 ಮಂದಿಗೆ ಸೋಂಕು ಬಂದಿದೆ. ಇದನ್ನೂ ಓದಿ: ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು
ಇಂದು ಒಟ್ಟು 2,037 ಮಂದಿ ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿ 746, ದಕ್ಷಿಣ ಕನ್ನಡ 239, ಬೀದರ್ 150, ಉಡುಪಿ 88, ವಿಜಯಪುರ 85, ದಾವಣಗೆರೆ 84 ಮಂದಿಗೆ ಸೋಂಕು ಬಂದಿದೆ.
ಒಟ್ಟು 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ 362, ಕಲಬುರಗಿ 29, ಧಾರವಾಡ 23, ಹಾಸನ 18, ಮಂಡ್ಯ ರಾಯಚೂರಿನಲ್ಲಿ ತಲಾ 17, ಬಳ್ಳಾರಿ, ಗದಗ್‌ನಲ್ಲಿ ತಲಾ 16 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.