ನವದೆಹಲಿ: ಮೊಬೈಲ್ ಸಿಮ್ ಕಾರ್ಡ್ (SIM Card) ಅನ್ನು ಪಡೆಯಲು ಹಾಗೂ ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್‌ಗಳಂತಹ ಒಟಿಟಿ ಪ್ಲಾಟ್‌ಪಾರ್ಮ್‌ಗಳಲ್ಲಿ (OTT Platform) ಸೇವೆಯನ್ನು ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದರೆ ಅಂತಹವರಿಗೆ 1 ವರ್ಷದ ಜೈಲು ಹಾಗೂ 50,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.
ಹೌದು, ಟೆಲಿಕಾಂ (Telecom) ಬಳಕೆದಾರರನ್ನು ಆನ್‌ಲೈನ್ ವಂಚನೆ (Online fraud) ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಸೈಬರ್ ವಂಚಕರು ಅಪರಾಧವನ್ನು ಮಾಡಲು ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಾರೆ. ಈ ಮೂಲಕ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ತಮ್ಮ ಗುರುತನ್ನು ಮರೆ ಮಾಡಿ, ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಗಳಿಂದ ರಕ್ಷಿಸಲು ಭಾರತೀಯ ದೂರಸಂಪರ್ಕ ಮಸೂದೆ, 2022ರ ಕರಡು ಭಾಗವಾಗಿ ಭದ್ರತಾ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ದೂರಸಂಪರ್ಕ ಇಲಾಖೆ ಈಗ ಕರಡು ಮಸೂದೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ. ಇದನ್ನೂ ಓದಿ: ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?
ಕರಡು ಮಸೂದೆಯ ಸೆಕ್ಷನ್ 4ರ ಅಡಿಯಲ್ಲಿ ಉಪ-ವಿಭಾಗ 7ರ ಪ್ರಕಾರ, ತಪ್ಪು ಗುರುತು ನೀಡುವುದರಿಂದ 1 ವರ್ಷದ ಜೈಲು, 50,000 ರೂ. ವರೆಗೆ ದಂಡ ಹಾಗೂ ದೂರಸಂಪರ್ಕ ಸೇವೆಗಳಿಂದ ಅಮಾನತಾಗಬಹುದು. ಈ ಅಪರಾಧ ಎಸಗಿದವರನ್ನು ಪೊಲೀಸರು ಯಾವುದೇ ವಾರಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೇ ಬಂಧಿಸಬಹುದಾಗಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ