ಕೊರೊನಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೂ ಪರಿಹಾರ -ಕೇಂದ್ರ ಸರ್ಕಾರ

Public TV
1 Min Read
corona virus 1 1

ನವದೆಹಲಿ: ಕೋವಿಡ್-19 ಪಾಸಿಟಿವ್ ಎಂದು ಗುರುತಿಸಿ 30 ದಿನಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದ ಸದಸ್ಯರು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನೀಡುವ ಎಕ್ಸ್-ಗ್ರೇಷಿಯಾ ಪರಿಹಾರಕ್ಕೆ ಅರ್ಹರು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

supreme

ಈ ಬಗ್ಗೆ ಅಫಿಡೆವಿಟ್ ಸಲ್ಲಿಸಿರುವ ಕೇಂದ್ರ ಗೃಹ ಇಲಾಖೆ, ಡಿಎಂಎ ಸೆಕ್ಷನ್ 12(111) ಅಡಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(NDMA) ನೀಡಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‍ಎಫ್) ಅಡಿಯಲ್ಲಿ ನೀಡಲಾದ ಹಣಕಾಸಿನ ಸಹಾಯವನ್ನು ಪಡೆಯಲು ಕುಟುಂಬ ಸದಸ್ಯರು ಅರ್ಹರು ಎಂದು ಉಲ್ಲೇಖಿಸಿದೆ. ಮತ್ತು ಈ ಬಗ್ಗೆ ಕೋರ್ಟ್ ನಡುವೆ ನಿರ್ದೇಶನಗಳನ್ನು ನೀಡಬಹುದು ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

covid 19

ಪರಿಹಾರದ ವ್ಯಾಪ್ತಿಯನ್ನು ವಿಶಾಲವಾಗಿಸಲು ಮತ್ತು ಅರ್ಹರಿಗೆ ಪರಿಹಾರ ದಕ್ಕಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿರುವ ಸರ್ಕಾರ, ಪರೀಕ್ಷೆಯ ದಿನಾಂಕದಿಂದ ಅಥವಾ ಕೊವೀಡ್-19 ಪ್ರಕರಣ ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳಲ್ಲಿ ಸಂಭವಿಸುವ ಸಾವುಗಳನ್ನು ಕೊರೊನಾ ಸಾವುಗಳು ಎಂದು ಪರಿಗಣಿಸಲಾಗುತ್ತದೆ.ಕೊರೊನಾಂದಾಗಿ, ಸಾವು ಆಸ್ಪತ್ರೆಯ ಒಳಗೆ ಅಥಾವ ಹೊರಗೆ ಎಲ್ಲೆ ಆದರೂ ಅದನ್ನು ಪರಿಗಣಿಸಲು ನಿರ್ಧರಿಸಿದೆ.

ರೋಗಿ ಆಸ್ಪತ್ರೆ ಸೇರಿ 30 ದಿನಗಳ ಸುಧೀರ್ಘ ಚಿಕಿತ್ಸೆಯ ಬಳಿಕ ಸಾವನ್ನಪ್ಪಿದರೂ ಅದನ್ನು ಕೊರೊನಾ ಸಾವು ಎಂದು ಭಾವಿಸಲಾಗುವುದು ಎಂದು ಅಫಿಡೆವಿಟ್ ನಲ್ಲಿ ಹೇಳಿದೆ. ಕೋವಿಡ್-19 ಗೆ ಬಲಿಯಾದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬ ಸದಸ್ಯರಿಗೆ 50,000 ಪರಿಹಾರವನ್ನು ಶಿಫಾರಸು ಮಾಡಿರುವುದಾಗಿ ಕೇಂದ್ರ ಸರ್ಕಾರವು ಈ ಹಿಂದೆ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು.  ಇದನ್ನೂ ಓದಿ: ಕೋವಿಡ್‍ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ವಿಳಂಬ- ಕೇಂದ್ರಕ್ಕೆ ಸುಪ್ರೀಂ ತರಾಟೆ

Share This Article
Leave a Comment

Leave a Reply

Your email address will not be published. Required fields are marked *