ಬೆಂಗಳೂರು: ಕಾಂಗ್ರೆಸ್ ನಾಯಕ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಬುಧವಾರ ಚಿಕ್ಕಪೇಟೆಯ ಕ್ಷೇತ್ರ ನಿವಾಸಿಗಳಿಗೆ ಚೆಕ್ ವಿತರಣೆ ಮಾಡಿದ್ದಾರೆ. ಖಾಸಗಿ ಯೋಜನೆಯಂತೆ ಕೆಜಿಎಫ್ ಬಾಬು 50 ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂ.ಯಂತೆ ಚೆಕ್ ವಿತರಣೆಗೆ ಮುಂದಾಗಿದ್ದಾರೆ. ಈ ಮೂಲಕ ಮಾಜಿ ಕಾಂಗ್ರೆಸ್ ಶಾಸಕ ಆರ್.ವಿ ದೇವರಾಜ್ಗೆ ಕೆಜಿಎಫ್ ಬಾಬು ಸೆಡ್ಡು ಹೊಡೆದಿದ್ದಾರೆ.
ಚಿಕ್ಕಪೇಟೆಯ ಸ್ಥಳೀಯ ನಾಯಕರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿರುವ ಕೆಜಿಎಫ್ ಬಾಬು, ಒಟ್ಟು 26 ಕೋಟಿ ರೂ. ಚೆಕ್ ವಿತರಿಸುವ ಬ್ಯಾನರ್ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆ ನಗರದ ಟೌನ್ ಹಾಲ್ನಲ್ಲಿ ಸುಮಾರು 700ಕ್ಕೂ ಹೆಚ್ಚು ಜನರು ಜಮಾಯಿಸಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರಿಗೆ ಆಹ್ವಾನ – ಯು.ಟಿ.ಖಾದರ್ ಆರೋಪ
Advertisement
Advertisement
ಚೆಕ್ ವಿತರಣೆ ವೇಳೆ ಮಾತನಾಡಿದ ಕೆಜಿಎಫ್ ಬಾಬು, ಈ ಕಾರ್ಯಕ್ರಮವನ್ನು ನಿಲ್ಲಿಸಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಒತ್ತಡ ಹಾಕುತ್ತಿದ್ದಾರೆ. ಅರ್.ವಿ ದೇವರಾಜ್ ಅಲ್ಲ, ಹೈಕಮಾಂಡ್ ಹೇಳಿದರೂ ಈ ಚೆಕ್ ವಿತರಣೆ ಕಾರ್ಯಕ್ರಮ ನಿಲ್ಲಿಸಲ್ಲ. ನಾನು ಪಾರ್ಟಿ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಮಾಡುತ್ತಿಲ್ಲ. ಉಮ್ರಾ ಡೆವಲಪರ್ ಚಾರಿಟೇಬಲ್ ಟ್ರಸ್ಟ್ ಹೆಸರಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇನೆ. ನಾನು ನನ್ನ ಸ್ವಂತ ದುಡ್ಡು ಕೊಡುತ್ತಿದ್ದೇನೆ. ನಾನು ಶ್ರೀಮಂತ, 10 ಜನ ಶ್ರೀಮಂತರಲ್ಲಿ ನಾನು ಕೂಡಾ ಒಬ್ಬ. 50 ಸಾವಿರ ಮನೆಗಳಿಗೆ 5 ಸಾವಿರ ರೂ.ಚೆಕ್ ಕೊಟ್ಟೇ ಕೊಡುತ್ತೇನೆ. ನನಗೆ ಎಷ್ಟೇ ಒತ್ತಡ ಬಂದರೂ ಕಾರ್ಯಕ್ರಮ ನಿಲ್ಲಿಸುವುದಿಲ್ಲ, ಇಟ್ಟ ಹೆಜ್ಜೆ ಮತ್ತೆ ಹಿಂದಿಡಲ್ಲ ಎಂದರು. ಇದನ್ನೂ ಓದಿ: ನಿನ್ನೆಯಷ್ಟೇ ಬಂಧನವಾಗಿದ್ದ ನಟ ಕಮಾಲ್ ಖಾನ್ ಆಸ್ಪತ್ರೆಗೆ ದಾಖಲು
Advertisement
ಈ ಹಿಂದೆ ಕೊಲಾರದಲ್ಲಿ ಎಂಎಲ್ಸಿ ಚುನಾವಣೆಯ ವೇಳೆ ಕೆಜಿಎಫ್ ಬಾಬು ಇದೇ ರೀತಿ ಚೆಕ್ ವಿತರಣೆ ಮಾಡಿದ್ದರು. ಈ ಹಿಂದೆ ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದು, ಈಗ ಕೆಜಿಎಫ್ ಬಾಬು ಚಿಕ್ಕಪೇಟೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೇಳುತ್ತಿದ್ದಾರೆ.