ಟೆಲ್ ಅವಿವ್: ಹಮಾಸ್ ಉಗ್ರರ (Hamas Militants) ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ (Gaza Strip) ಇಸ್ರೇಲ್ (Israel) ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ (Rocket Attack) ಮಾಡಲಾಗಿದ್ದು, ಇದೀಗ ಇಸ್ರೇಲ್ ಯುದ್ಧದ (War) ಘೋಷಣೆ ಮಾಡಿದೆ.
ಶನಿವಾರ ಮುಂಜಾನೆ ಗಾಜಾಪಟ್ಟಿಯಿಂದ 5,000 ರಾಕೆಟ್‌ಗಳ ದಾಳಿ ನಡೆಸಲಾಗಿದ್ದು, ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದ್ದಾರೆ.
ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ. ಇದನ್ನೂ ಓದಿ: ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್
ಪ್ರಧಾನಿ ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲಿಯೇ ಭದ್ರತಾ ಮುಖ್ಯಸ್ಥರ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ತನ್ನ ಕೃತ್ಯಗಳಿಗಾಗಿ ಹಮಾಸ್ ಭಾರೀ ಬೆಲೆ ತೆರಬೇಕಾಗಲಿದೆ ಎಂದು ನೆತನ್ಯಾಹು ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು
Web Stories