ಕೊಪ್ಪಳ: ವಿಘ್ನನಿವಾರಕ, ಆದಿವಂದಿತ ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಮಕ್ಕಳು ವಿನಾಯಕನ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ನಾಲ್ಕು ಸಾವಿರ ಮಕ್ಕಳು ಬೃಹತ್ ಆಕಾರದ ರೇಖಾ ಚಿತ್ರದ ಮೂಲಕ ಮೂಡಿಸಲಾದ ಗಣೇಶನ ಮೂರ್ತಿ ರೂಪಕದಲ್ಲಿ ಐದು ಸಾವಿರ ದೀಪಗಳನ್ನು ಬೆಳಗಿಸಿದ್ದಾರೆ.ಇದನ್ನೂ ಓದಿ: ಸ್ವತಃ ದೇವರೇ ಹೇಳಿದ್ರೂ ಮತ್ತೆ ಚುನಾವಣೆಗೆ ನಿಲ್ಲಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತು
ಈ ಮನಮೋಹಕ ದೃಶ್ಯವನ್ನು ಸುಮಾರು ಐನೂರು ಮೀಟರ್ ಎತ್ತರದಿಂದ ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ. ಅದರಲ್ಲೂ ಸಂಜೆಯ ಬಳಿಕ ಮಕ್ಕಳು, ಗಣೇಶನ ಆಕೃತಿಯ ಮೇಲೆ ದೀಪ ಹಚ್ಚಿರುವ ದೃಶ್ಯ ಹೆಚ್ಚು ಆಕರ್ಷಕವಾಗಿ ಸೆರೆ ಹಿಡಿಯಲಾಗಿದೆ.
ಈ ಬಗ್ಗೆ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, 4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿಯ ರಚಿಸುವ ಮೂಲಕ ಗಣೇಶನ ಹಬ್ಬಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪೂರ್ವ, ಪ್ರಾಥಮಿಕ ಹಂತದಿಂದ ಎಂಟನೆಯ ತರಗತಿವರೆಗಿನ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾಡಿಸಲಾಗಿದೆ.
ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿಯನ್ನು ಬೆಳೆಸುವುದರೊಂದಿಗೆ ಅವರಲ್ಲಿ ಅಂತರ್ಗತವಾಗಿರುವ ಕರಕುಶಲ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸಲು ಈ ಕೆಲಸ ಮಾಡಿಸಲಾಗಿದೆ. ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ ಎಂದರು.ಇದನ್ನೂ ಓದಿ:

